ಸೋಮವಾರ, 26 ಅಕ್ಟೋಬರ್ 2026
Trending

ಚಾಮರಾಜನಗರ: ಶೂಟೌಟ್‌ ಪ್ರತಿಭಟನೆ ವೇಳೆ ʼಜೂನಿಯರ್‌ ವೀರಪ್ಪನ್‌ ಪ್ರತ್ಯಕ್ಷʼ!

ಕಾವೇರಿ ವನ್ಯಧಾನ ಶೂಟೌಟ್‌ ಪ್ರಕರಣಕ್ಕೆ ಕುರಿತಂತೆ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದು, ಮೃತ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯ ಮಾಡಿದ್ರು. ಈ ಪ್ರತಿಭಟನೆಯಲ್ಲಿ ವೀರಪ್ಪನ್‌ ಖ್ಯಾತಿಯ ಗಗನದೊಡ್ಡಿ ಗೋವಿಂದ ಪ್ರತ್ಯಕ್ಷರಾಗಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Sponsored

ಈ ಹಿಂದೆ ಗಂಗನದೊಡ್ಡಿ ಗೋವಿಂದ ಪಚ್ಚೆದೊಡ್ಡಿ ಅರಣ್ಯದಲ್ಲಿ ಹುಲಿಯನ್ನು ಮೂರು ಭಾಗವಾಗಿ ತುಂಡರಿಸಿದ್ದ ಪ್ರಕರಣದ ಆರೋಪಿ ಈತ. ಸುಮಾರು ತಿಂಗಳುಗಳ ಕಾಲ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದನು. ನಂತರ ಮೈಸೂರಿನಲ್ಲಿ ಈತನನ್ನು ಬಂಧನ ಮಾಡಲಾಗಿತ್ತು. ಸದ್ಯಕ್ಕೆ ಗಂಗನದೊಡ್ಡಿ ಗೋವಿಂದ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾನೆ. ಇದೀಗ ಮೂವರು ಎನ್‌ಕೌಂಟರ್‌ ಪ್ರಕರಣ ಸಂಬಂಧ ನಡೆದಿದ್ದ ಪ್ರತಿಭಟನೆಯಲ್ಲಿ ಗಂಗನದೊಡ್ಡಿ ಗೋವಿಂದ ಪ್ರತ್ಯಕ್ಷವಾಗಿದ್ದು, ಪ್ರತಿಭಟನಕಾರರನ್ನು ಉದ್ರಿಕ್ತಗೊಳಿಸಿರುವ ಆರೋಪವಿದೆ.

Advertisement
Advertisement

 

 

Advertisement