ಭಾನುವಾರ, 25 ಅಕ್ಟೋಬರ್ 2026
Trending

Telangana : ಮದುವೆಗೆ ಹುಡುಗಿ ಹುಡುಕಿ ಕೊಟ್ಟಿಲ್ಲವೆಂದು ತಾಯಿಯ ಕೊಂದು ಕೈಕಾಲು ಕತ್ತರಿಸಿದ ಪಾಪಿ ಮಗ!

ಸೂಕ್ತ ಹುಡುಗಿಯನ್ನು ಹುಡುಕಿ ಕೊಟ್ಟಿಲ್ಲವೆಂದು ಸಿಟ್ಟಿನಿಂದ ತಾಯಿಯನ್ನು ಕೊಲೆ (murder) ಮಾಡಿ ಆಕೆಯ ಕೈಕಾಲು ಕತ್ತರಿಸಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ (Telangana) ಬೆಳಕಿಗೆ ಬಂದಿದೆ.

Telangana
Image credit: The indian express

Telangana : ಮಗನೊಬ್ಬ ಮದುವೆಯಾಗಲು (marriage) ಸೂಕ್ತ ಹುಡುಗಿಯನ್ನು ಹುಡುಕಿ ಕೊಟ್ಟಿಲ್ಲವೆಂದು ಸಿಟ್ಟಿನಿಂದ ತಾಯಿಯನ್ನು ಕೊಲೆ (murder) ಮಾಡಿ ಆಕೆಯ ಕೈಕಾಲು ಕತ್ತರಿಸಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ (Telangana) ಬೆಳಕಿಗೆ ಬಂದಿದೆ. ಬುಧವಾರ ಮಧ್ಯರಾತ್ರಿ ಜಿಲ್ಲೆಯ ಬಂಡಾ ಮೈಲಾರಂ ಗ್ರಾಮದ ಮಹಿಳೆಯ ನಿವಾಸದಲ್ಲಿ ಈ ಘಟನೆ ನಡೆದಿದೆ.

Sponsored

ತಾಯಿ (45 ವ.) ತನ್ನ ಮದುವೆಗೆ ಸೂಕ್ತ ಜೋಡಿಯನ್ನು ಹುಡುಕಿ ಕೊಡಲಿಲ್ಲ ಎಂದು ಮಗನು ಆಕೆಯನ್ನು ಇಟ್ಟಿಗೆಯಿಂದ ಹೊಡೆದು ಕೊಂದಿದ್ದಾನೆ. ನಂತರ ಆಕೆಯ ಕತ್ತು ಸೀಳಿ ಕಾಲುಗಳನ್ನು ಕತ್ತರಿಸಿದ್ದಾನೆ.

ಈ ಬಗ್ಗೆ ಮಹಿಳೆಯ ಮಗಳು ಪೊಲೀಸರಿಗೆ ದೂರು ನೀಡಿದ್ದು,
ದೂರಿನ ಆಧಾರದ ಮೇಲೆ, ಪ್ರಕರಣವನ್ನು ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಈ ವೇಳೆ ಸಂತ್ರಸ್ತೆಯ ಮಗ ಮತ್ತು ಇನ್ನೊಬ್ಬ ಸಂಬಂಧಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಮಹಿಳೆಯ ಮಗ ಮತ್ತು ಇನ್ನೊಬ್ಬ ಸಂಬಂಧಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಮಗ ಲಾಭಕ್ಕಾಗಿ ಕೊಲೆ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Anand Mahindra: ಭಾರತ ಬಡ ದೇಶ, ಚಂದ್ರಯಾನ-3 ಬೇಕಾ ಎಂದ ಬ್ರಿಟಿಷ್ ನಿರೂಪಕ ! ಆನಂದ್ ಮಹೀಂದ್ರಾ ನೀಡಿದ್ರು ಖಡಕ್ ಉತ್ತರ!!

Comments are closed.