Anand Mahindra: ಭಾರತ ಬಡ ದೇಶ, ಚಂದ್ರಯಾನ-3 ಬೇಕಾ ಎಂದ ಬ್ರಿಟಿಷ್ ನಿರೂಪಕ ! ಆನಂದ್ ಮಹೀಂದ್ರಾ ನೀಡಿದ್ರು ಖಡಕ್ ಉತ್ತರ!!

Nation news chandrayaan-3 Anand Mahindra salms British anchor for remarks about India poverty

Anand Mahindra: ಚಂದ್ರಯಾನ-3 (Chandrayaan-3) ಯೋಜನೆ ಯಶಸ್ವಿಯಾಗಿದ್ದು, ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿದಿದೆ. ಇದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ, ಚಂದ್ರನ (Moon) ಮೇಲೆ ಇಳಿದ ನಾಲ್ಕನೇ ರಾಷ್ಟ್ರ ಭಾರತ (India) ಆಗಿದೆ. ದೇಶವೇ ಖುಷಿಯಿಂದ ಕುಣಿದಾಡುವ ಹೊತ್ತಿನಲ್ಲಿ ನಟ ಚೇತನ್ (actor chethan), ಪ್ರಕಾಶ್ ರಾಜ್ (Prakash Raj)ಇನ್ನೂ ಕೆಲವರು ಚಂದ್ರಯಾನದ ಕುರಿತು ಟೀಕೆ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಇದೀಗ ಚಂದ್ರಯಾನ-3 ಕುರಿತು ಬ್ರಿಟಿಷ್ ನಿರೂಪಕ ಪ್ರಶ್ನೆ ಎತ್ತಿದ್ದು, ಇದಕ್ಕೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಖಡಕ್ ಉತ್ತರ ನೀಡಿದ್ದಾರೆ. ಬಿಬಿಸಿ ನಿರೂಪಕ, “ ಭಾರತ, ಮೂಲಭೂತ ಮೂಲಸೌಕರ್ಯಗಳ ಕೊರತೆಯಿರುವ ದೇಶ, ಅಲ್ಲಿ ಸಾಕಷ್ಟು ಬಡತನವಿದೆ. 700 ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಶೌಚಾಲಯಗಳಿಲ್ಲ. ವಾಸ್ತವವಾಗಿ, ಭಾರತ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಈ ರೀತಿ ಹಣವನ್ನು ಖರ್ಚು ಮಾಡಬೇಕೇ? ” ಎಂದು ಪ್ರಶ್ನಿಸಿದ್ದರು. ಇದಕ್ಕೆ ಆನಂದ್ ಮಹೀಂದ್ರಾ ಪ್ರತಿಕ್ರಿಯಿಸಿದ್ದಾರೆ.

ಬಿಬಿಸಿ ನಿರೂಪಕನ ಟ್ರೇಟ್‌’ಗೆ ಆನಂದ್ ಮಹೀಂದ್ರಾ ರೀಟ್ವೀಟ್ ಮಾಡಿದ್ದು, “ಸತ್ಯವೇನೆಂದ್ರೆ, ನಮ್ಮ ಬಡತನವು ದಶಕಗಳ ವಸಾಹತುಶಾಹಿ ಆಳ್ವಿಕೆಯ ಪರಿಣಾಮವಾಗಿತ್ತು. ಅದು ಇಡೀ ಉಪಖಂಡದ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡಿತು. ಲೂಟಿ ಮಾಡಿದ್ದು ನಮ್ಮ ಸ್ವಂತ ಸಾಮರ್ಥ್ಯದ ಮೇಲಿನ ನಮ್ಮ ಹೆಮ್ಮೆ ಮತ್ತು ನಂಬಿಕೆಯನ್ನು. ಅತ್ಯಂತ ಅಮೂಲ್ಯವಾದ ಆಸ್ತಿ ಕೊಹಿನೂರ್ ವಜ್ರವನ್ನಲ್ಲ. ಯಾಕಂದ್ರೆ ವಸಾಹತುಶಾಹಿಯ ಗುರಿ- ಅದರ ಅತ್ಯಂತ ಕಪಟ ಪರಿಣಾಮ ಅದರ ಬಲಿಪಶುಗಳಿಗೆ ಅವರ ಕೀಳರಿಮೆಯನ್ನು ಮನವರಿಕೆ ಮಾಡಿಕೊಡುವುದು. ಅದಕ್ಕಾಗಿಯೇ ಶೌಚಾಲಯಗಳು ಮತ್ತು ಬಾಹ್ಯಾಕಾಶ ಪರಿಶೋಧನೆ ಎರಡರಲ್ಲೂ ಹೂಡಿಕೆ ಮಾಡುವುದು ವಿರೋಧಾಭಾಸವಲ್ಲ ಸರ್, ಚಂದ್ರನಲ್ಲಿಗೆ ಹೋಗಿದ್ದರಿಂದ ಏನಾಗುತ್ತದೆ ಎಂದರೆ ಅದು ನಮ್ಮ ಹೆಮ್ಮೆ ಮತ್ತು ಆತ್ಮವಿಶ್ವಾಸವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಇದು ವಿಜ್ಞಾನದ ಮೂಲಕ ಪ್ರಗತಿಯಲ್ಲಿ ನಂಬಿಕೆಯನ್ನು ಸೃಷ್ಟಿಸುತ್ತದೆ. ಇದು ನಮ್ಮನ್ನು ಬಡತನದಿಂದ ಮೇಲೆತ್ತುವ ಆಕಾಂಕ್ಷೆಯನ್ನ ನೀಡುತ್ತದೆ. ಅತ್ಯಂತ ದೊಡ್ಡ ಬಡತನವೆಂದರೆ ಆಕಾಂಕ್ಷೆಯ ಬಡತನ” ಎಂದಿದ್ದಾರೆ.

ಇದನ್ನೂ ಓದಿ: ಇಂದು ಈ ರಾಶಿಯವರ ಕಷ್ಟಕ್ಕೆ ಆಪ್ತ ಸ್ನೇಹಿತರು ಕೈ ಹಿಡಿಯುತ್ತಾರೆ! ನಿರೀಕ್ಷಿತ ಲಾಭ ನಿಮ್ಮದಾಗುತ್ತದೆ!!!

Leave A Reply

Your email address will not be published.