ಸೋಮವಾರ, 26 ಅಕ್ಟೋಬರ್ 2026
Trending

ಕೇರಳದ ವ್ಯಕ್ತಿಗೆ ಟ್ರಾಫಿಕ್ ನಲ್ಲಿ ಹೃದಯಾಘಾತ; ಬಸ್‌ನಿಂದ ಇಳಿದು ಸಿಪಿಆರ್ ನೀಡಿ ಜೀವ ಉಳಿಸಿದ ಇಬ್ಬರು ನರ್ಸ್‌ಗಳು

ಎರ್ನಾಕುಲಂ, ಜು.3: ಬೆಂಗಳೂರಲ್ಲಿ ನರ್ಸಿಂಗ್‌ ಓದುತ್ತಿದ್ದ ಒಬ್ಬ ನರ್ಸ್‌ ಸೇರಿ ಕೇರಳದ ಎರ್ನಾಕುಲಂ ಜಿಲ್ಲೆಯ ಇಬ್ಬರು ದಾದಿಯರ ಸಮಯಪ್ರಜ್ಞೆಯಿಂದ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ವ್ಯಕ್ತಿಯು ಹೃದಯಾಘಾತಕ್ಕೊಳಗಾಗಿದ್ದು, ಆತನ ಜೀವನ ಉಳಿಸಿದ ಘಟನೆ ನಡೆದಿದೆ.

Sponsored

ಅಂಗಮಾಲಿನ ಎಲ್‌ಎಫ್‌ ಆಸ್ಪತ್ರೆಯ ಸ್ಟಾಫ್‌ ನರ್ಸ್‌ ಅಂಜಲಿ ಬೈಜು ಮತ್ತು ಬೆಂಗಳೂರಿನ ನರ್ಸಿಂಗ್‌ ವಿದ್ಯಾರ್ಥಿನಿ ಆರ್ದ್ರಾ ರಾಜ್‌ ಅವರೇ ಜೀವ ಉಳಿಸಿದವರು.

ಬುಧವಾರ ಬೆಳಿಗ್ಗೆ ಕಾಲಡಿ ಸೇತುವೆ ಬಳಿ ಸಿನೋಜ್‌ ಎನ್ನುವವರು ಕಾರಿನಲ್ಲಿ ಹೋಗುತ್ತಿರುವಾಗ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಟ್ರಾಫಿಕ್‌ ಜಾಮ್‌ ಕಾರಣ ಸಂಚಾರ ಸ್ಥಗಿತಗೊಂಡಿದ್ದು, ಸಿನೋಜ್‌ ಕಾರಿನೊಳಗೆ ಕುಸಿದು ಬಿದ್ದಿದ್ದರು.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ನರ್ಸ್‌ಗಳು ರಸ್ತೆ ಬದಿಯ ಗದ್ದಲವನ್ನು ಗಮನಿಸಿ, ಕೂಡಲೇ ಬಸ್‌ನಿಂದ ಇಳಿದು ಕಾರಿನ ಬಳಿಗೆ ಬಂದು ಸಿಪಿಆರ್‌ ನೀಡಿದರು. ಆತನನ್ನು ಆಸ್ಪತ್ರೆಗೆ ದಾಖಲು ಮಾಡುವವರೆಗೂ ಸಿಪಿಆರ್‌ ನೀಡಿ ಜೀವ ಉಳಿಸಿದರು.

ಈ ಇಬ್ಬರು ದಾದಿಯ ಕಾಳಜಿಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.