ಸೋಮವಾರ, 26 ಅಕ್ಟೋಬರ್ 2026
Trending

ಮಲಗಿದ್ದಾಗ ಮುಖದ ಮೇಲೆ ಬಿದ್ದ ಬಾವಲಿ, ರೇಬಿಸ್‌ನಿಂದ ಬಾಲಕ ಸಾವು

Bat Protein
Image Source: Earth.com

ಕೆನಡಾದಲ್ಲಿ 11 ವರ್ಷದ ಬಾಲಕನೋರ್ವ ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಎಚ್ಚರಗೊಂಡಾಗ ಆತನ ಮೂಗು ಮತ್ತು ಬಾಯಿಯ ಮೇಲೆ ಬಾವಲಿಯೊಂದು ಬಿದ್ದಿರುವುದು ಗೊತ್ತಾಗಿದೆ. ಬಾಲಕ ಕೂಡಲೇ ಅದನ್ನು ಕೈಯಿಂದ ದೂರ ತಳ್ಳಿದ್ದಾನೆ. ನಂತರ ಆತನ ತಂದೆ ಬಾವಲಿಯನ್ನು ಹಿಡಿದು ಹೊರಗೆ ಬಿಟ್ಟಿದ್ದಾರೆ. ಆದರೆ ಬಾಲಕನ ಮೈಮೇಲೆ ಯಾವುದೇ ಗಾಯ ಅಥವಾ ರಕ್ತದ ಗುರುತುಗಳು ಇಲ್ಲದಿದ್ದರಿಂದ, ಕುಟುಂಬದವರು ಯಾವುದೇ ಚಿಕಿತ್ಸೆ ಆ ಕ್ಷಣಕ್ಕೆ ನೀಡಿರಲಿಲ್ಲ.

Sponsored

ಈ ಘಟನೆ ನಡೆದು ಸುಮಾರು 19 ದಿನದ ನಂತರ ಬಾಲಕ ನಿರಂತರ ವಾಂತಿ, ಮುಖ ಮರಗಟ್ಟುವಿಕೆ, ಜುಮ್ಮೆನಿಸುವಿಕೆ ತೊಂದರೆಗಳು ಕಾಣಿಸಿದೆ. ಪರಿಸ್ಥಿತಿ ಹದಗೆಟ್ಟಾಗ ಕೂಡಲೇ ಹೆತ್ತವರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಅಲ್ಲಿ ವೈದ್ಯರು ಇದೊಂದು ರೇಬಿಸ್‌ ಎಂದು ಪತ್ತೆ ಹಚ್ಚುವಷ್ಟರಲ್ಲಿಯೇ ವೈರಸ್‌ ಆತನ ಮೆದುಳು ಹಾಗೂ ನರಮಂಡಲಕ್ಕೆ ವ್ಯಾಪಿಸಿದೆ. ಎರಡು ವಾರಗಳ ತೀವ್ರ ನಿಗಾ ಘಟಕದ ಚಿಕಿತ್ಸೆ ಬಳಿಕ ಬಾಲಕ ಕೊನೆಯುಸಿರೆಳೆದಿದ್ದಾನೆ.

ವೈದ್ಯರ ಪ್ರಕಾರ, ಬಾವಲಿಗಳ ಹಲ್ಲುಗಳು, ಉಗುರುಗಳು ಅತ್ಯಂತ ಸೂಕ್ಷ್ಮ ಹಾಗೂ ಚೂಪಾಗಿರುತ್ತದೆ. ಅವು ಕಚ್ಚಿದಾಗ, ಗೀಚಿದಾಗ ಯಾವುದೇ ದೊಡ್ಡ ಗಾಯ, ರಕ್ತದ ಗುರುತುಗಳು ಮೂಡುವುದಿಲ್ಲ. ಇದರಿಂದ ಜನರಿಗೆ ಸೋಂಕು ತಗುಲಿದೆ ಎನ್ನುವುದು ತಿಳಿಯುವುದೇ ಇಲ್ಲ.

ರೇಬಿಸ್‌ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಲಸಿಕೆ ಮತ್ತು ಇಮ್ಯೂನ್‌ ಗ್ಲೋಬ್ಯುಲಿನ್‌ ಪಡೆದರೆ ರೇಬಿಸ್‌ ಅನ್ನು ಶೇ.100 ತಡೆಯಬಹುದು. ನೀವು ಮಲಗಿರುವ ಕೋಣೆಯಲ್ಲಿ ಬಾವಲಿ ಪತ್ತೆಯಾದರೆ ಅಥವಾ ಬಾವಲಿ ಜೊತೆ ನೇರ ಶಾರೀರಿಕ ಸಂಪರ್ಕ ಉಂಟಾದರೆ ಯಾವುದೇ ಗುರುತು ಇಲ್ಲದಿದ್ದರೂ ಕೂಡಲೇ ವೈದ್ಯರನ್ನು ಭೇಟಿಯಾಗಿ ರೇಬೀಸ್‌ ಲಸಿಕೆ ಪಡೆಯವುದು ಉತ್ತಮ.