ಭಾನುವಾರ, 25 ಅಕ್ಟೋಬರ್ 2026
Trending

ಒಂದೇ ಒಂದು ಗ್ರಾಂ ಚಿನ್ನ ಹಾಕದೆ, ಆರ್ಟಿಫಿಶಿಯಲ್‌ ಜ್ಯುವೆಲ್ಲರಿನೂ ಹಾಕದೆ ಹಸೆಮಣೆಗೆ ಬಂದ ನವವಧು

ಇನ್ಸ್‌ಟಾಗ್ರಾಮ್‌ನಲ್ಲಿ ವೈರಲ್‌ ಆಗಿರುವ ಕೇರಳದ ಒಂದು ಮದುವೆ ವಿಡಿಯೋ ಇದೀಗ ದೇಶದ ಗಮನ ಸೆಳೆದಿದೆ. ಅಲ್ಲದೇ ಈ ವಿಡಿಯೋ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.

Sponsored

ಸಾಮಾನ್ಯವಾಗಿ ಭಾರತೀಯ ಮದುವೆಗಳಲ್ಲಿ ಅದರಲ್ಲೂ ಕರಾವಳಿ ಮತ್ತು ಕೇರಳದ ಭಾಗದಲ್ಲಿ ಮದುವೆ ಎಂದರೆ ಚಿನ್ನದ ಒಡವೆಗಳು ಬಹಳ ಮುಖ್ಯ. ನೂರಾರು ಗ್ರಾಂ ಚಿನ್ನದ ಆಭರಣಗಳನ್ನು ಧರಿಸುವುದು ಅಲ್ಲಿನ ಸಂಪ್ರದಾಯ. ಆದರೆ ಈಗ ವೈರಲ್‌ ಆಗಿರುವ ವಿಡಿಯೋದಲ್ಲಿನ ಯುವತಿ ಒಂದೇ ಒಂದು ಗ್ರಾಂ ಚಿನ್ನ ಕೂಡಾ ಧರಿಸದೆ ಮದುವೆಯಾಗಿದ್ದಾರೆ. ಅಷ್ಟೇ ಅಲ್ಲ ಒಂದು ಒಂದೇ ಆರ್ಟಿಫಿಶಿಯಲ್‌ ಜ್ಯುವೆಲ್ಲರಿ ಕೂಡಾ ಹಾಕಿಲ್ಲ. ಕನಿಷ್ಠ ಒಂದು ಕಿವಿಯೋಲೆಯನ್ನೂ ಕೂಡಾ ಧರಿಸದೆ ಈ ಯುವತಿ ಹಸೆಮಣೆ ಏರಿದ್ದಾರೆ.

ಗ್ಯಾಂಡ್‌ ವರ್ಕ್‌ ಇರುವ ರೆಡ್‌ ಬ್ಲೌಸ್‌ ಹಾಗೂ ಕೆಂಬಣ್ಣದ ದುಪಟ್ಟಾವನ್ನು ಧರಿಸಿದ್ದು, ಮೇಕಪ್‌, ಹೇರ್‌ಸ್ಟೈಲ್‌ನಿಂದ ವಧು ಕಂಗೊಳಿಸಿದ್ದಾರೆ. ಆದರೆ ಮೈಮೇಲೆ ಯಾವುದೇ ಆಭರಣವಿಲ್ಲ. ಜೆನ್‌ಜೀ ತಲೆಮಾರು ಈ ನೋ ಗೋಲ್ಡ್‌, ನೋ ಜ್ಯುವೆಲ್ಲರಿ ಕಾನ್ಸೆಪ್ಟ್‌ಗೆ ಫುಲ್‌ ಫಿದಾ ಆಗಿದ್ದು, ಜೈ ಎಂದಿದ್ದಾರೆ.

https://www.instagram.com/reel/DaRcdzsIM5v/?utm_source=ig_embed&utm_campaign=loading