ಲಕ್ನೋ: ಮುಂಬರುವ 2027 ರ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚುನಾವಣಾ ಪೂರ್ವ ಭರವಸೆ ಘೋಷಿಸಿದ್ದಾರೆ. 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ತಿಳಿಸಿದ್ದಾರೆ.
Sponsoredಉತ್ತರ ಪ್ರದೇಶ ಮಹಿಳಾ ಉದ್ಯಮಿ ಕ್ರೆಡಿಟ್ ಯೋಜನೆಯಡಿಯಲ್ಲಿ 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಮೂರು ಕಂತುಗಳಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ವರದಿಯಾಗಿದೆ.
ಮೊದಲ ಕಂತಿನಲ್ಲಿ ರೂ.20,000 ನೀಡಲಾಗುವುದು. ಮೊದಲ ಕಂತಿನಲ್ಲಿ ಸಾಲ ಪಡೆದ ಮಹಿಳೆಯರು ಕಾಲಕಾಲಕ್ಕೆ ಮರುಪಾವತಿ ಮಾಡಿದರೆ, ಆ ಮಹಿಳೆಯರು ಎರಡೇ ಕಂತಿನಲ್ಲಿ ರೂ.30000 ಸಾಲ ಪಡೆಯಲು ಅರ್ಹರಾಗುತ್ತಾರೆ. ಎರಡನೇ ಕಂತಿನ ಹಣ ಮರುಪಾವತಿ ನಂತರ ಮೂರನೇ ಕಂತಿನಲ್ಲಿ ರೂ.50000 ಸಾಲ ಪಡೆಯಬಹುದು.




