ಹಾಸನ: ಉತ್ತರ ಭಾರತದ ನೇಪಾಳದಲ್ಲಿ ಘಟನೆಯಂತೆ ದಕ್ಷಿಣ ಭಾರತದಲ್ಲೂ ಆಗುವ ಲಕ್ಷಣವಿದೆ. ಸಾವು-ನೋವು, ದುಃಖ, ಊರುಗಳು ಕೊಚ್ಚಿ ಹೋಗುವ ಘಟನೆಗಳು ಇದೆ. ಹಾಗಾಗಿ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ.
Sponsoredಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೋಡಿಶ್ರೀಗಳು, ಈ ವರ್ಷದ ಭವಿಷ್ಯವನ್ನು ನಾನು ಮೊದಲೇ ಹೇಳಿದ್ದೆ. ಮುಂಗಾರು ಮಳೆ ವಿರಳ, ಹಿಂಗಾರು ಮಳೆ ಆಗುತ್ತದೆ. ಜನ ಜಂಗುಳಿಯಾಗುತ್ತದೆ. ಅನ್ನ, ಆಹಾರ, ನೀರಿಗೆ ಕೊರತೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಅಲ್ಲದೇ, ಸಾವು-ನೋವುಗಳು ಹೆಚ್ಚಾಗುತ್ತದೆ. ವಿಪರೀತವಾದ ಪ್ರವಾಹ ಆಗುತ್ತೆ ಅಂಥ ಹೇಳಿದ್ದೆ, ಈಗ ಅದು ನಡೆಯುತ್ತಿದೆ. ಈಗ ಇಲ್ಲಿಂದ ಕಷ್ಟ ಮುಂದುವರೆಯುತ್ತೆ, ಆದರೂ ಹಿಂಗಾರು ಮಳೆ ಶುಭವಾಗುವ ಲಕ್ಷಣ ಇದೆ. ಕೆರೆ, ಕಟ್ಟೆಗಳು ತುಂಬುತ್ತವೆ, ಅದರ ಬಗ್ಗೆ ತೊಂದರೆಯಿಲ್ಲ. ಹಿಂಗಾರು ಮಳೆ ಸಮೃದ್ದಿಯಾಗುತ್ತದೆ. ಹಿಂಗಾರು ಮಳೆ ಆಗುತ್ತೆ, ಶೇಕಡಾ 90 ಜನರಿಗೆ ಪರಿಹಾರ ಸಿಗುತ್ತೆ ಎಂದು ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಕಾಲಜ್ಞಾನದಲ್ಲಿ ಒಂದು ಮಾತಿದೆ, ಕಟ್ಟೆ ಇಲ್ಲದ ಬಾವಿ ಹುಟ್ಟಿ, ನೆಟ್ಟ ನೀ ಸುರಂಗವ ಕೊರೆದು, ಗಟ್ಟಿ ಭೂಮಿ ಬಟ್ಟ ಬಯಲಾಯಿತು. ಹಿಂದಿನ ಕಾಲದಲ್ಲಿ ನಲವತ್ತು, ಐವತ್ತು ಅಡಿ ಬಾವಿ ತೆಗೆಯುತ್ತಿದ್ದರು. ಆ ನೀರು ತಂದು ಕುಡಿದರೆ ಮನುಷ್ಯನಿಗೆ ಆರೋಗ್ಯವಿತ್ತು. ಈಗ ಸಾವಿರಾರು ಅಡಿ ಕೊರೆದು ಗಡಸು ನೀರು. ಮನುಷ್ಯನಿಗೆ ಆರೋಗ್ಯ ಇಲ್ಲ. ನರಗಳ ಕೊರತೆ, ಹಲ್ಲುಗಳು ಬಿದ್ದು ಹೋದವು. ಜ್ಞಾನ ಇಲ್ಲ, ಊಟ ಮಾಡಲು ಆಗಲ್ಲ. ಬಾರಿ ಹೊಡೆತ ಬಿದ್ದಿತು ಎಂದು ತಿಳಿಸಿದರು.
ಭೂಮಿ ಕೊರೆದಿದ್ದರಿಂದ ಗಟ್ಟಿ ಭೂಮಿ ಬಟ್ಟ ಬಯಲಾಯಿತು. ನೀರು ಸ್ಥಿರವಾಗಲಿಲ್ಲ. ಅದು ಎಲ್ಲಿ ಬೇಕು ಹರಿದುಬಂತು. ಹಾಗಾಗಿ ಸಾವು ನೋವುಗಳಾದವು. ಇದಕ್ಕೆ ಪರಿಹಾರ ಎಂದರೆ ನಾವು ನಂಬಿರುವ ಭಗವಂತನನ್ನು ಪ್ರಾರ್ಥನೆ ಮಾಡುವುದು ಎಂದು ಸೂಚಿಸಿದರು.





