ಎಮ್ಮೆ ಹೊಟ್ಟೆಯಲ್ಲಿ ಬಿಳಿ ಹೋರಿ ಮರಿ ಜನನ: ಅಪ್ಪ ಹೋರಿ ಮತ್ತು ಕಿಲಾಡಿ ಎಮ್ಮೆಯ ಕಿತಾಪತಿ!

ಯಾದಗಿರಿ: ಅಮ್ಮನಂತೆ ಮಗ/ ಮಗಳು ಎನ್ನುವಂತೆ ಸಾಮಾನ್ಯವಾಗಿ ಎಮ್ಮೆ ತನ್ನ ತದ್ರೂಪಿ ಮರಿಗೆ ಜನ್ಮ ನೀಡುತ್ತದೆ. ಕೋಣ ಕೂಡಾ ಕಪ್ಪಗಿರುವ ಕಾರಣ ಎಮ್ಮೆ ಕರು ಯಾವಾಗಲೂ ಕಪ್ಪಗೇ ಇರುತ್ತದೆ.
Sponsoredಆದರೆ ಯಾದಗಿರಿ ಜಿಲ್ಲೆಯಲ್ಲಿ ಈ ಪ್ರಕೃತಿಯ ನಿಯಮಕ್ಕೆ ಚಾಲೆಂಜ್ ಎದುರಾಗಿದೆ. ಕಪ್ಪು ಬಣ್ಣದ ಎಮ್ಮೆಯೊಂದರ ಹೊಟ್ಟೆಯಲ್ಲಿ ಬಿಳಿ ಬಣ್ಣದ ಕರು ಹುಟ್ಟಿದೆ. ಆದರೆ ಎಮ್ಮೆ ಕರು ಹುಟ್ಟಿದ್ದರೆ ಈ ಮಟ್ಟಿಗೆ ಅಚ್ಚರಿ ಪಡುವ ಅಗತ್ಯ ಇರಲಿಲ್ಲ. ಆದರೆ ಈ ಸಲ ಅಚ್ಚರಿಯ ಜತೆ ‘ಎಮ್ಮೆ ಅಮ್ಮ’ನ ಮೇಲೆ ಅಪನಂಬಿಕೆ ಕೂಡಾ ಬೆಳೆದಿದೆ. ಕಾರಣ ಎಮ್ಮೆಯ ಹೊಟ್ಟೆಯಲ್ಲಿ ಹೋರಿ ಮರಿ ಜನನವಾದುದಕ್ಕೆ!
ಹೌದು, ಎಮ್ಮೆಯ ಹೊಟ್ಟೆಯಲ್ಲಿ ‘ಹೋರಿ ಕರು’ ಜನ್ಮ ತಳೆದಿದ್ದು, ಈ ವಿಚಿತ್ರ ಹಾಗೂ ಅಪರೂಪದ ಘಟನೆ ಕಂಡು ಇಡೀ ಗ್ರಾಮ ಬೆರಗಾಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ರೈತ ಪರಶುರಾಮ ಎಂಬುವವರಿಗೆ ಸೇರಿದ ಎಮ್ಮೆ ಈ ಅಪರೂಪದ ಹೋರಿ ಕರುಗೆ ಜನ್ಮ ನೀಡಿದೆ. ಸುಮಾರು 10 ತಿಂಗಳುಗಳ ಕಾಲ ಗರ್ಭಿಣಿಯಾಗಿದ್ದ ಕಪ್ಪು ಎಮ್ಮೆಯು ಈ ಕರುಗೆ ಜನ್ಮ ನೀಡಿದ್ದು, ಕರುವಿನ ಬಣ್ಣ ಸಂಪೂರ್ಣ ಬಿಳಿಯಾಗಿದ್ದು ಹೋರಿ ಕರುವಿನಂತಿದೆ. ರೈತ ಪರಶುರಾಮ ಅವರು ತಮ್ಮ ಹೊಲದಲ್ಲಿ ಎಮ್ಮೆ ಹಾಗೂ ಹೋರಿಯನ್ನು ಒಂದೇ ಕಡೆ ಕಟ್ಟುತ್ತಿದ್ದರು. ಹೀಗಾಗಿ, ಅಪ್ಪ ಹೋರಿ ಮತ್ತು ಕಿಲಾಡಿ ಎಮ್ಮೆಯ ಕಿತಾಪತಿಯಿಂದ ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನಿಸಿರಬಹುದು ಎಂದು ಊಹಿಸಲಾಗಿದ್ದು, ಈ ವಿಚಿತ್ರ ಕರುವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಪರಶುರಾಮ ಅವರ ಮನೆಗೆ ದಾಳಿಯಿಟ್ಟ ಮಾದರಿಯಲ್ಲಿ ಬರುತ್ತಿದ್ದಾರೆ. ಅಮ್ಮ ಎಮ್ಮೆ ಮಾತ್ರ ತನ್ನದೇ ಮಗುವನ್ನು ಅಚ್ಚರಿಯಿಂದ ನೋಡುತ್ತಿದೆಯಂತೆ. ಕೋಣಗಳು ಕೋಪಿಸಿಕೊಂಡು ಹೋರಿಯ ಮೇಲೆ ಹಾಯಲು ಹೊಂಚು ಹಾಕಿರುವುದು ಕೇವಲ ಸೋಶಿಯಲ್ ಮೀಡಿಯಾ ಊಹಾಪೋಹಗಳಷ್ಟೇ!
ಜೀವಶಾಸ್ತ್ರದ ಪ್ರಕಾರ ಎಮ್ಮೆಯ ಹೊಟ್ಟೆಯಲ್ಲಿ ಹೋರಿ ಮರಿ ಜನಿಸುವುದು ಅಸಾಧ್ಯ. ಎಮ್ಮೆ ಮತ್ತು ಹೋರಿ ವಿಭಿನ್ನ ಪ್ರಾಣಿಗಳು; ಅವುಗಳ ನಡುವೆ ಸಹಜ ಸಂತಾನೋತ್ಪತ್ತಿ ಆಗುವುದಿಲ್ಲ. ಆದರೆ ಇಲ್ಲಿ ಕಪ್ಪು ಎಮ್ಮೆಗೆ ಸಂಪೂರ್ಣ ಬಿಳಿ ಬಣ್ಣದ ಕರು ಜನ್ಮ ನೀಡಿದ್ದು ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ. ಬಿಳಿ ಕರು ಜನಿಸಿದ್ದು, ಕೋಣದ ಸಂಪರ್ಕದಿಂದಲೇ ಆಗಿರಬೇಕು. ಆದರೆ ಅದು ಆನುವಂಶಿಕ ವ್ಯತ್ಯಾಸದಿಂದ ಎಂದು ಪಶುವೈದ್ಯರ ಹೇಳಿಕೆ. ಈ ಹಿಂದೆ ಪ್ರಯೋಗಾಲಯಗಳಲ್ಲಿ ಹೋರಿ ಮತ್ತು ಹೆಮ್ಮೆಯ ಸಂತಾನೋತ್ಪತ್ತಿಗೆ ಪ್ರಯತ್ನಿಸಲಾಗಿತ್ತು. ಆರಂಭಿಕ ಹಂತದಲ್ಲಿ ಜೀವೋತ್ಪತ್ತಿಯಾದರೂ ಕೊನೆಗೆ ಮರಿ ಹುಟ್ಟಿರಲಿಲ್ಲ. ಎಮ್ಮೆ ಮತ್ತು ಹೋರಿಗಳ ವಂಶವಾಹಿಗಳ ಸಂಖ್ಯೆಯಲ್ಲಿ ಇರುವ ವ್ಯತ್ಯಾಸ ಇದಕ್ಕೆ ಕಾರಣ…ಹೀಗೆ ಮಾಡೋಣವೇ




