ಸೋಮವಾರ, 26 ಅಕ್ಟೋಬರ್ 2026
Trending

ಬೆಳಗ್ಗೆ 5 ಗಂಟೆಗೆ ಎದ್ದರೆ ಯಶಸ್ಸು ನಿಮ್ಮದಾಗುತ್ತಾ?

Advertisement

ಬೆಳಗ್ಗೆ ಬೇಗ ಎದ್ದರೆ ಅದೃಷ್ಟ ಖುಲಾಯಿಸುತ್ತೆ, ಯಶಸ್ಸು ನಿಮ್ಮ ಹೆಬ್ಬಾಗಿಲಿಗೆ ಬರುತ್ತದೆ ಎನ್ನುವ ಮಾತುಗಳನ್ನು ನೀವು ಸಣ್ಣ ವಯಸ್ಸಿನಿಂದ ಹಿರಿಯರ ಬಾಯಲ್ಲಿ ಕೇಳಿರಬಹುದು. ಆದರೆ ಗಡಿಯಾರದ ಮುಳ್ಳು ಬೆಳಗಿನ ಐದು ಗಂಟೆಯನ್ನು ತೋರಿಸಿದರೆ ಯಶಸ್ಸು ನಮಗೆ ಅದಾಗಿಯೇ ಒಲಿಯುತ್ತದೆಯೇ? ಇದಕ್ಕೆ ಉತ್ತರ ಇಲ್ಲ. ಹಾಗಾದರೆ ಬೆಳಗ್ಗೆ ಐದು ಗಂಟೆಗೆ ಏಳುವುದರಲ್ಲಿ ಏನಿದೆ ವಿಶೇಷ? ಇದಕ್ಕೆ ಕೇವಲ ಸಾಂಪ್ರದಾಯಿಕ ನಂಬಿಕೆ ಮಾತ್ರವಲ್ಲ, ದೃಢವಾದ ವೈಜ್ಞಾನಿಕ ಮತ್ತು ಮಾನಸಿಕ ಕಾರಣಗಳಿವೆ.

Sponsored

​ಮನಸ್ಸಿನ ಏಕಾಗ್ರತೆ ಮತ್ತು ಪ್ರಶಾಂತತೆ
ನಿಮಗೆ ತಿಳಿದಿರಬಹುದು, ಬೆಳಗಿನ ಜಾವದಲ್ಲಿ ವಾತಾವರಣ ನಿರಾಳವಾಗಿರುತ್ತದೆ. ಯಾವುದೇ ಸದ್ದಗಳು ಇರುವುದಿಲ್ಲ. ಜಗತ್ತು ನಿದ್ದೆ ಮಾಡುತ್ತಿರುವಾಗ ನಿಮ್ಮ ಮನಸ್ಸು ಸಂಪೂರ್ಣ ಶಾಂತವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಮೂಡುವ ಆಲೋಚನೆಗಳು ಅತ್ಯಂತ ಸ್ಪಷ್ಟವಾಗಿರುತ್ತದೆ. ಹಾಗಾಗಿ ದಿನದ ಇಡೀ ಯೋಜನೆಯನ್ನು ರೂಪಿಸಲು, ಕೌಶಲ್ಯವನ್ನು ಕಲಿಯಲು ಇದು ಅತ್ಯಂತ ಅಕ್ಕರೆಯ ಸಕ್ಕರೆಯ ಸಮಯ.

Advertisement
Advertisement

​ ಶಿಸ್ತು
ಬೆಳಗ್ಗೆ ಐದು ಗಂಟೆಗೆ ಏಳುವುದನ್ನು ಅಭ್ಯಾಸ ಮಾಡಿಕೊಳ್ಳುವುದೆಂದರೆ ಕೇವಲ ಬೇಗ ಎದ್ದಂತೆ ಅಲ್ಲ; ಅದು ನಿಮ್ಮ ಜೀವನದ ಮೇಲೆ ನೀವು ಸಾಧಿಸುವ ಸ್ವಯಂ-ಶಿಸ್ತು. ದಿನನಿತ್ಯ ನಿರ್ದಿಷ್ಟ ಸಮಯಕ್ಕೆ ಎದ್ದಾಗ ನಮ್ಮ ದೇಹದ ಜೈವಿಕ ಗಡಿಯಾರ ಸಮತೋಲನದಲ್ಲಿರುತ್ತದೆ. ಇದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ನೇರವಾಗಿ ಸಹಾಯ ಮಾಡುತ್ತದೆ.
​
ದಿನದ ಮೇಲೆ ಸಂಪೂರ್ಣ ನಿಯಂತ್ರಣ
ಯಾರಿಗೆ ತಡವಾಗಿ ಏಳುವ ಅಭ್ಯಾಸವಿದೆಯೋ? ಅವರ ಇಡೀ ದಿನ ಸಮಯದ ಹಿಂದೆಯೇ ಓಡಬೇಕಾಗುತ್ತದೆ. ಬೆಳಗ್ಗೆ ಐದು ಗಂಟೆಗೆ ಏಳುವ ವ್ಯಕ್ತಿ ಮುಕ್ತ ಸಮಯದಲ್ಲಿ ವ್ಯಾಯಾಮ, ಧ್ಯಾನ್‌, ಓದು ಅಥವಾ ಪ್ರಮುಖ ಕೆಲಸಗಳನ್ನು ಮುಗಿಸಬಹುದು. ಇವು ನಿಮ್ಮನ್ನು ದಿನಪೂರ್ತಿ ಯಾವುದೇ ಒತ್ತಡವಿಲ್ಲದೆ, ಸಮಾಧಾನದಿಂದ ನಿಭಾಯಿಸುವ ಆತ್ಮವಿಶ್ವಾಸವನ್ನು ಮೂಡಿಸುತ್ತದೆ.
​
ಹಾಗಾದರೆ, ಬೆಳಗಿನ ಐದು ಗಂಟೆಗೆ ಎದ್ದರೆ ಯಶಸ್ಸು ಖಂಡಿತವೇ?
ಬೆಳಗ್ಗೆ ಐದು ಗಂಟೆಗೆ ಎದ್ದು ಹಾಸಿಗೆ ಮೇಲೆ ಕುಳಿತು ಸಮಯ ವ್ಯರ್ಥ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಈ ಸಮಯದಲ್ಲಿ ನೀವು ಗುರಿ ಸಾಧನೆಗೆ, ಸ್ವಯಂ ಅಭಿವೃದ್ಧಿಗೆ ಮತ್ತು ಸಕಾರಾತ್ಮಕ ಚಿಂತನೆಗೆ ಬಳಸಿಕೊಂಡಿರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಬೆಳಗ್ಗಿನ ನಿದ್ರೆಯನ್ನು ಸೋಲಿಸುವುದೇ ನಿಮ್ಮ ದಿನದ ಮೊದಲ ಜಯ, ಆ ಗೆಲುವೇ ಮುಂದಿನ ದೊಡ್ಡ ಯಶಸ್ಸಿಗೆ ಭದ್ರ ಬುನಾದಿಯಾಗುತ್ತದೆ.

Advertisement
div class="ere-sticky">