ನೆದರ್ಲ್ಯಾಂಡ್ಸ್ನ ಪ್ರಧಾನಿ ರಾಬ್ ಜೆಟ್ಟನ್ (Rob Jetten) ಹಾಗೂ ಅವರ ಸಂಗಾತಿ, ಅರ್ಜೆಂಟೀನಾದ ವೃತ್ತಿಪರ ಫೀಲ್ಡ್ ಹಾಕಿ ಆಟಗಾರ ನಿಕೋಲಸ್ ಕೀನನ್ (Nicolas Keenan) ತಂದೆಯಾಗುವ ಖುಷಿಯಲ್ಲಿದ್ದಾರೆ. ಈ ಜೋಡಿಯು ತಾವು ಮೊದಲ ಮಗುವನ್ನು ಬರಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.
ವಾಪಸ್ ಗರ್ಭಧಾರಣೆಯ (Surrogacy) ಮೂಲಕ ತಂದೆಯಾಗುತ್ತಿರುವ ಜೋಡಿ:
ರಾಬ್ ಜೆಟ್ಟನ್ ಹಾಗೂ ನಿಕೋಲಸ್ ಕೀನನ್ ಅವರು ಸೂರೋಗಸಿ (ಬಾಡಿಗೆ ತಾಯಿ) ಮತ್ತು ದಾನಿಯೊಬ್ಬರ ಅಂಡಾಣುವಿನ ಸಹಾಯದಿಂದ ಪಿತೃತ್ವದ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. 2027ರ ವಸಂತ ಕಾಲದಲ್ಲಿ ಮಗು ಜನಿಸುವ ನಿರೀಕ್ಷೆಯಿದೆ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಲ್ಟ್ರಾಸೌಂಡ್ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. “ಒಬ್ಬ ವಿಶೇಷ ವ್ಯಕ್ತಿ ನಮ್ಮ ಬಳಿಗೆ ಬರುತ್ತಿದ್ದಾರೆ. 2027ರಲ್ಲಿ ಸಿಗೋಣ ಪುಟ್ಟ ಮಗುವೇ” ಎಂದು ಅವರು ಬರೆದುಕೊಂಡಿದ್ದಾರೆ.
ಸ್ನೇಹಿತರ ನೆರವಿನಿಂದ ಪಿತೃತ್ವದ ಹೆಜ್ಜೆ:
ಈ ಪ್ರಕ್ರಿಯೆಯಲ್ಲಿ ತಮ್ಮೊಂದಿಗೆ ನಿಂತು ಸಹಾಯ ಮಾಡಿದ ಬಾಡಿಗೆ ತಾಯಿ ‘ಲಿಸಾ’ ಹಾಗೂ ಅಂಡಾಣು ದಾನಿಗೆ ದಂಪತಿ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ವಾಣಿಜ್ಯ ಉದ್ದೇಶಗಳಿಲ್ಲದೆ, ಕೇವಲ ಸ್ನೇಹ ಮತ್ತು ಸಹಾಯದ ಮನೋಭಾವದಿಂದ ಈ ಪ್ರಕ್ರಿಯೆಗೆ ಒಪ್ಪಿಕೊಂಡ ಸ್ನೇಹಿತರಿಗೆ ತಾವು ಆಪಾರಿಯಾಗಿರುವುದಾಗಿ ಅವರು ತಿಳಿಸಿದ್ದಾರೆ. ನೆದರ್ಲ್ಯಾಂಡ್ಸ್ನಲ್ಲಿಯೇ ಐವಿಎಫ್ (IVF) ಚಿಕಿತ್ಸೆಯ ಮೂಲಕ ಈ ಗರ್ಭಧಾರಣೆ ಯಶಸ್ವಿಯಾಗಿದೆ.
Sponsoredಇತಿಹಾಸ ಸೃಷ್ಟಿಸಿದ ಪ್ರಧಾನಿ:
ರಾಬ್ ಜೆಟ್ಟನ್ ಅವರು ನೆದರ್ಲ್ಯಾಂಡ್ಸ್ನ ಇತಿಹಾಸದಲ್ಲಿಯೇ ಅಧಿಕಾರದಲ್ಲಿರುವಾಗಲೇ ಮಗುವನ್ನು ಹೊಂದಲಿರುವ ಮೊದಲ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 2024ರ ನವೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ರಾಬ್ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಬಳಿಕ ತಮ್ಮ ಮದುವೆಯನ್ನು ಮುಂದೂಡಿದ್ದರು. ಸದ್ಯ ಈ ಅಪರೂಪದ ಜೋಡಿಯ ಖುಷಿಗೆ ಜಗತ್ತಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.




