ಡಾ. ಮುಖ್ಯಮಂತ್ರಿ ಚಂದ್ರು ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಪ್ರಸಿದ್ಧ ‘ಮುಖ್ಯಮಂತ್ರಿ’ ರಂಗನಾಟಕದ ೯೦೦ನೇ ಪ್ರದರ್ಶನ ಇತ್ತೀಚಿಗೆ ಬೆಂಗಳೂರಿನ ಪ್ರಸಿದ್ಧ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ನಾಟಕ ನೋಡಲು ಸಿಎಂ ಡಿಕೆಶಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಒಟ್ಟಿಗೆ ಪಾಲ್ಗೊಂಡಿದ್ದರು.
ಈ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಡಿಕೆ ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ರಾಜಕೀಯ ಗಣ್ಯರು ಹಾಗೂ ಕಲಾಪ್ರೇಮಿಗಳು ಸಾಕ್ಷಿಯಾದರು.
ಈ ಕಲಾತ್ಮಕ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದಾಗಿ ಭಾಗವಹಿಸಿ, ಇಡೀ ನಾಟಕವನ್ನು ವೀಕ್ಷಿಸಿ ಆನಂದಿಸಿದರು. ಪ್ರದರ್ಶನ ಮುಕ್ತಾಯಗೊಂಡ ನಂತರ ರಂಗದ ಮೇಲೆ ಸುದೀರ್ಘ ಪಯಣ ಬೆಳೆಸಿರುವ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಅವರ ಅಭಿನಯ ಹಾಗೂ ರಂಗಸೇವೆಯನ್ನು ಸಿದ್ಧರಾಮಯ್ಯ ಅವರು ಮನಸಾರೆ ಶ್ಲಾಘಿಸಿ, ಗೌರವಿಸಿದರು.



