ಗುವಾಹಟಿಯ ಗೌಹಾತಿ ವಿಶ್ವವಿದ್ಯಾಲಯದ 22 ವರ್ಷದ ನಿಮಿಷಾ ಠಾಕುರಿಯಾ ಎಂಬ ಹಿಂದೂ ವಿದ್ಯಾರ್ಥಿನಿ ಧರಾಪುರ್-ಗರಾಲ್ ಪ್ರದೇಶದ ಹೋಮ್ ಸ್ಟೇ ಒಂದರಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾಳೆ.
ಸಾವು ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಅವರು ತಾಯಿಗೆ ಕರೆ ಮಾಡಿ, “ಅಮ್ಮಾ.. ಅವರು ನನ್ನನ್ನು ಕೊಂದು ಹಾಕುತ್ತಾರೆ!” ಎಂದು ಆತಂಕದಿಂದ ಹೇಳಿಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಸ್ನೇಹಿತ ಆಸಿಫ್ ಆಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.
ಧಾರಪುರ ನಿವಾಸಿಯಾದ ಮೃತ ನಿಮಿಷಾ ಗುವಾಹಟಿ ವಿಶ್ವವಿಗದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ ಓದುತಿದ್ದರು. ನಿಮಿಷಾ ಸಂಜೆ 5 ಗಂಟೆಯ ಸುಮಾರಿಗೆ ಗೆಳತಿಯ ಮನೆಗೆ ಹೋಗುವುದಾಗಿ ತನ್ನ ತಾಯಿಗೆ ಹೇಳಿದ್ದರು. ಆದರೆ ನಿಮಿಷಾ ಸ್ನೇಹಿತ ಆಸಿಫ್ ಅಲಿ ಜತೆ ಗರಾಲ್ನಲ್ಲಿರುವ ಹೋಮ್ಸ್ಟೇಗೆ ಹೋಗಿದ್ದರು. ರಾತ್ರಿ 10 ಗಂಟೆಗೆ ತಾಯಿ ಕರೆ ಮಾಡಿದಾಗ, ಊಟ ಮಾಡುತ್ತಿದ್ದು ತಡವಾದರೆ ಗೆಳತಿಯ ಮನೆಯಲ್ಲೇ ತಂಗುವುದಾಗಿ ತಿಳಿಸಿದ್ದರು. ಆದರೆ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ನಿಮಿಷಾ ಮತ್ತೆ ತಾಯಿಗೆ ಕರೆ ಮಾಡಿ ಅಳುತ್ತಾ, “ಅಮ್ಮ, ಅವರು ನನ್ನನ್ನು ಕೊಲ್ಲುತ್ತಾರೆ. ನನ್ನನ್ನು ಕೊಂದು ಹಾಕುತ್ತಾರೆ” ಎಂದು ಹೇಳಿದ್ದಳು. ತಕ್ಷಣವೇ ಆಕೆಯ ಫೋನ್ ಅನ್ನು ಯಾರೋ ಕಸಿದುಕೊಂಡರು ಎಂದು ನಿಮಿಷಾ ತಾಯಿ ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣವೇ ಅಜಾರಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಹೋಮ್ಸ್ಟೇನ ಅಡುಗೆಯವ ಹೇಳಿಕೆ ಪ್ರಕಾರ, ರಾತ್ರಿಯ ವೇಳೆ ಪುರುಷನೊಬ್ಬ ಕೂಗಾಡುತ್ತಿರುವುದು ಕೇಳಿಸಿತ್ತು. “ಅವರು ಕೊಠಡಿಯನ್ನು ಯಾವಾಗ ಕಾಯ್ದಿರಿಸಿದ್ದರು ಅಥವಾ ಯಾವಾಗ ಬಂದರು ಎಂದು ನನಗೆ ನಿಖರವಾಗಿ ಗೊತ್ತಿಲ್ಲ. ಆದರೆ ಆ ಸಮಯದಲ್ಲಿ ಪುರುಷನ ಧ್ವನಿಯೊಂದು ದಾದಾ, ಎದ್ದೇಳಿ, ಎದ್ದೇಳಿ ಎಂದು ಯಾರನ್ನೋ ಏಳಿಸುತ್ತಿರುವಂತೆ ಜೋರಾಗಿ ಕೂಗುತ್ತಿದ್ದುದ್ದು ನನಗೆ ಕೇಳಿಸಿತು ಎಂದು ಬೈಲುಂಗ್ ಹೇಳಿದರು. ನಾವು ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ನಂತರ ಮತ್ತೆ ಕೊಠಡಿಯಿಂದ ಅಳುವ ಸದ್ದು ಕೇಳಿಸಿತು. ಒಳಗೆ ಹೋಗಿ ನೋಡಿದಾಗ ಯುವಕನೊಬ್ಬ ನೆಲದ ಮೇಲೆ ಬಿದ್ದಿದ್ದ ಯುವತಿಯ ದೇಹವನ್ನು ಹಿಡಿದುಕೊಂಡಿದ್ದ ಎಂದರು.
“ನಂತರ ನಾನು ಮಾಲಕರಿಗೆ ಕರೆ ಮಾಡಿದೆ. ಅವರು ಬಂದು ಆಂಬ್ಯುಲೆನ್ಸ್ಗೆ ಕರೆ ಮಾಡಿ ಅವರು ಹೊರಟುಹೋದರು” ಎಂದು ಬೈಲುಂಗ್ ಹೇಳಿದರು. ನಿಮಿಷಾ ಮತ್ತು ಅವರ ಸ್ನೇಹಿತ ರೂಮ್ ನಂಬರ್ 10 ಅನ್ನು ಬುಕ್ ಮಾಡಿದ್ದರು. ಆದರೆ ಕೊಠಡಿ 9 ಖಾಲಿ ಇದ್ದುದರಿಂದ ಅದನ್ನು ಸಹ ಬಳಸಿದ್ದರು. ಇವರಿಬ್ಬರೂ ಹಿಂದೆಯು ಕೂಡಾ ಈ ಹೋಮ್ಸ್ಟೇನಲ್ಲಿ ತಂಗಿದ್ದರು ಎಂದು ಕೆಲವು ಸಿಬ್ಬಂದಿ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿರುವ ಗುವಾಹಟಿ ಪಶ್ಚಿಮ ಉಪ ಪೊಲೀಸ್ ಆಯುಕ್ತ ಬೋಲಿನ್ ದೇವೂರಿ ನೀಡಿರುವ ಮಾಹಿತಿಯ ಪ್ರಕಾರ, ನಿಮಿಷಾ ಠಾಕುರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಲಿ ತಿಳಿಸಿದ್ದಾನೆ. ಆದರೆ ನಾವು ಆತನ ವಾದವನ್ನು ನಂಬುವುದಿಲ್ಲ. ನಾವು ತನಿಖೆಯನ್ನು ಮುಂದುವರಿಸಬೇಕಿದೆ,ʼʼ ಎಂದು ಹೇಳಿದ್ದಾರೆ.




