ಸುಮಾರು 74 ವರ್ಷದ ವೃದ್ಧ ಮಹಿಳೆಯೊಬ್ಬರು ಐವಿಎಫ್ ಮುಖಾಂತರ ಅವಳಿಜಬಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆದಿದೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಬಾರಿ ವೈರಲ್ ಆಗುತ್ತಿದೆ.
Sponsoredಆಂಧ್ರ ಪ್ರದೇಶದ ಗುಂಟೂರಿನ ಎತ್ತಮಟ್ಟಿ ಎಂಬಲ್ಲಿ ಈ ಘಟನೆ ನಡೆದಿದೆ. 74 ವರ್ಷದ ಮಹಿಳೆ ಮಂಗಾಯಮ್ಮ ಐವಿಎಫ್ ತಂತ್ರಜ್ಞಾನದ ಮೂಲಕ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರ್ರಾಮಟ್ಟಿ ಮಂಗಾಯಮ್ಮ ಮತ್ತು ಅವರ ಪತಿ ರಾಜಾ ರಾವ್ ಅವರಿಗೆ ಮದಯವೆಯಾಗಿ ಹಲವು ವರ್ಷಗಳಾದರೂ ಮಗು ಆಗಿರಲಿಲ್ಲ. ಮಗುವನ್ನು ಹೊಂದಲು ಹಲವು ವರ್ಷಗಳಿಂದ ಪ್ರಯತ್ನಿಸಿದ್ದರು. ಆದಾಗ್ಯೂ, ಮಂಗಾಯಮ್ಮ ಗರ್ಭಿಣಿಯಾಗಿರಲಿಲ್ಲ.
ತಮ್ಮ ನೆರೆಹೊರೆಯ ಮಹಿಳೆಯೊಬ್ಬರು 55ನೇ ವಯಸ್ಸಿನಲ್ಲಿ ಕೃತಕ ಗರ್ಭಧಾರಣೆಯ ಮೂಲಕ ಜನ್ಮ ನೀಡಿದ ನಂತರ ಮಂಗಾಯಮ್ಮ ಅವರಿಗೂ ಮಗು ಹೊಂದಬೇಕು ಎನ್ನುವ ಆಸೆ ಮತ್ತೆ ಚಿಗುರಿತು. ಈ ತಂತ್ರಜ್ಞಾನದ ಮೂಲಕ ತಮಗೂ ಮಕ್ಕಳಾಗಬಹುದು ಎಂಬ ಭರವಸೆಯಿಟ್ಟುಕೊಂಡರು. ಹೀಗಾಗಿ ದಂಪತಿ ಗುಂಟೂರಿನಲ್ಲಿ ವೈದ್ಯರನ್ನು ಸಂಪರ್ಕಿಸಿದರು.
ದಾನಿಗಳ ಅಂಡಾಣು ಮತ್ತು ರಾಜಾ ರಾವ್ ಅವರ ವೀರ್ಯವನ್ನು ಬಳಸಿಕೊಂಡು ಐವಿಎಫ್ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಬಳಿಕ ಚಿಕಿತ್ಸೆ ಮೂಲಕ ಈ ಇಳಿ ವಯಸ್ಸಿನಲ್ಲೂ ಮಂಗಾಯಮ್ಮ ಗರ್ಭಿಣಿಯಾಗಿದ್ದು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ಮಂಗಾಯಮ್ಮ ಅವರನ್ನು ವೈದ್ಯಕೀಯ ಆರೈಕೆಯಲ್ಲಿ ಇರಿಸಲಾಗಿತ್ತು. ವಿವಿಧ ತಜ್ಞರು ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಆಸ್ಪತ್ರೆಯಲ್ಲಿಯೇ ಇರಲು ಸಲಹೆ ನೀಡಿದ್ದರು.
ಆದರೆ ಈ ವಯಸ್ಸಿನಲ್ಲೂ ಪೋಷಕರಾಗುವ ಬಗ್ಗೆ ಜನರು ಮಿಶ್ರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.




