ಭಾನುವಾರ, 25 ಅಕ್ಟೋಬರ್ 2026
Trending

ತರಬೇತಿ ವಿಮಾನ ಪತನಗೊಂಡು ಉಡುಪಿ ಮೂಲದ ಯುವಕ ಸಾವು

ಉಡುಪಿ: ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಉಡುಪಿ ಮೂಲದ ಟ್ರೈನಿ ಪೈಲಟ್‌ ಅಭಿಷೇಕ್‌ ಪೂಜಾರಿ ಸಾವಿಗೀಡಾಗಿರುವ ಘಟನೆ ಆ.27 ರಂದು ಸಂಭವಿಸಿದೆ.

Sponsored

ಹಿರಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯ ಕಣಜಾರು ಗ್ರಾಮದ ಕಡೆಬೆರ್ಕೆ ನಿವಾಸಿ ಅಭಿಷೇಕ್‌ ಪೂಜಾರಿ ಅವರು ಕಾನ್ಪುರದಲ್ಲಿ ಎರಡೂವರೆ ವರ್ಷಗಳಿಂದ ಟ್ರೈನಿ ಪೈಲಟ್‌ ಆಗಿ ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ.

ಪ್ರಭಾಕರ ಪೂಜಾರಿ ಹಾಗೂ ಶಶಿಕಲಾ ಪೂಜಾರಿ ಪೋಷಕರು ಮುಂಬಯಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ. ಮೃತರ ಕುಟುಂಬದವರು ಮುಂದಿನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕಾನ್ಪುರಕ್ಕೆ ತೆರಳಿದ್ದು, ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಪೊಲೀಸರ ಪ್ರಕಟಣೆ ತಿಳಿಸಿದೆ.