ಬುಧವಾರ, 28 ಅಕ್ಟೋಬರ್ 2026
Trending

Sharp memory disease: ನಿಮಗೆ ಗೊತ್ತಾ? ಉತ್ತಮ ಜ್ಞಾಪಕ ಶಕ್ತಿಯೂ ಒಂದು ರೋಗವಂತೆ! ಏನು ಹೇಳುತ್ತೆ ಈ ಕುರಿತ ಸಂಶೋಧನೆ?

ಅತಿಯಾದ ಜ್ಞಾಪಕ ಶಕ್ತಿ ಕೂಡ ಒಂದು ಕಾಯಿಲೆಯಂತೆ! ಈ ಕುರಿತ ಒಂದು ಸಂಶೋಧನೆ ಭಯಾನಕವಾದ ಸತ್ಯವನ್ನು ಹೊರಗೆಡಹಿದೆ.

Sharp Memory Disease

Sharp memory disease : ಈ ‘ಮರೆವು'(Oblivion) ಯಾರನ್ನೂ ಬಿಡೋದಿಲ್ಲ ಅಲ್ವಾ? ಬದುಕಿನುದ್ದಕ್ಕೂ ನಿರಂತರವಾಗಿ ನಮ್ಮೊಂದಿಗಿರುತ್ತದೆ. ಅಂದಹಾಗೆ ಈ ಮರೆವು ಹಾಗೂ ವಿಸ್ಮೃತಿಗಳೆರಡೂ ಕೆಲವೊಮ್ಮೆ ಕೆಲವೊಬ್ಬರಿಗೆ ಕಾಯಿಲೆಯಾಗಿ ಕಾಡುವುದೂ ಉಂಟು. ಇಂತಹ ಕಾಯಿಲೆಗಳು ವೃದ್ಧಾಪ್ಯದಲ್ಲಿ ಅಥವಾ ಅಪಘಾತದ ಕಾರಣದಿಂದಾಗಿ ಸಂಭವಿಸಬಹುದು. ಯಾರಾದರೂ ಉತ್ತಮವಾದ ಜ್ಞಾಪಕ ಶಕ್ತಿ ಹೊಂದಿದ್ದರೆ ಆತನ ಬಗ್ಗೆ ಮೆಚ್ಚುಗೆ ಮಾತಾಡೋದು, ಬುದ್ಧಿವಂತನೆಂದು ಸಂಬೋದಿಸೋದು ಹೀಗೆ ತರೆಹೆವಾರಿ ಹೊಗಳಿಕೆಗಳು ಆತನಿಗೆ ಸಲ್ಲುವುದಂಟು. ಆದರೆ ನಿಮಗೆ ಗೊತ್ತಾ ಈ ಅತಿಯಾದ ಜ್ಞಾಪಕ(Sharp memory disease) ಶಕ್ತಿ ಕೂಡ ಒಂದು ಕಾಯಿಲೆಯಂತೆ! ಈ ಕುರಿತ ಒಂದು ಸಂಶೋಧನೆ ಭಯಾನಕವಾದ ಸತ್ಯವನ್ನು ಹೊರಗೆಡಹಿದೆ.

Sponsored

ಮರೆತುಹೋಗುವುದು ಎಂದರೆ ಅದೇನು ಕೆಟ್ಟದ್ದಲ್ಲ. ಎಲ್ಲಾ ನೆನಪುಗಳನ್ನು ನಮ್ಮ ಮೆದುಳಿನಲ್ಲಿ ಸಂಗ್ರಹಿಸಲಾಗುವುದಿಲ್ಲ. ಕೆಲವು ನೆನಪುಗಳನ್ನು ಅಳಿಸಿ ಹಾಕುವುದರಿಂದ ನಮ್ಮ ದುಃಖ ಕಡಿಮೆಯಾಗುತ್ತದೆ. ಆದರೆ ಜೀವನದ ಒಂದೇ ಒಂದು ನೆನಪನ್ನು ಅಳಿಸದಿದ್ದರೆ, ಏನಾಗುತ್ತದೆ ಹೇಳಿ? ಹೌದು, ಇಂತಹ ಒಂದು ಸ್ಥಿತಿಯನ್ನು ಕಾಯಿಲೆ ಎಂದು ಪರಿಗಣಿಸಿ ಇದನ್ನು ‘ಜಿಲ್ ಹೈಪರ್ ಥೈಮೆಸಿಯಾ ಸಿಂಡ್ರೋಮ್'(Jill hyperthymesia syndrome) ಎಂದು ಗುರುತಿಸಲಾಗಿದೆ. ಇದನ್ನು ಉನ್ನತ ಆತ್ಮಚರಿತ್ರೆಯ ಸ್ಮರಣೆ ಎಂದೂ ಕರೆಯುತ್ತಾರೆ. ಈ ಕಾಯಿಲೆಯಿಂದ ಬಳಲುತ್ತಿರುವ ಜನರು ತಮ್ಮ ಜೀವನದಲ್ಲಿ ನಡೆದ ಸಂಗತಿಗಳನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತಾರೆ. ಜಗತ್ತಿನಲ್ಲಿ ಈ ಕಾಯಿಲೆಯಿಂದ ಬಳಲುತ್ತಿರುವವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಮುನ್ನಲೆಗೆ ಬರುತ್ತಿದ್ದಾರೆ.

Advertisement
Advertisement

ಅಂದಹಾಗೆ ಜಿಲ್ ಪ್ರೈಸ್(Jill Prise) ಎಂಬ ಮಹಿಳೆಯೊಬ್ಬರು ಇಂತದೊಂದು ಸಮಸ್ಯೆಗೆ ತುತ್ತಾಗಿದ್ದಾರೆ. ಅಂದರೆ ಜಿಲ್ ಪ್ರೈಸ್ ಈ ನೆನಪಿನ ಕಾಯಿಲೆ ಇದೆ. ಡೈಲಿ ಮೇಲ್ ವರದಿಯ ಪ್ರಕಾರ, ಜಿಲ್ ಹದಿನಾಲ್ಕನೇ ವರ್ಷದ ನಂತರದ ಎಲ್ಲಾ ನೆನಪುಗಳನ್ನು ಚೆನ್ನಾಗಿ ನೆನಪಿಸಿಕೊಳ್ಳುತ್ತಾರೆ. ಅವಳ ಮೆದುಳಿನಿಂದ ಯಾವುದೇ ನೆನಪುಗಳು ಅಳಿಸಿಹೋಗುವುದಿಲ್ಲ. ಅವರು ತಮ್ಮ ಈ ರೋಗದ ಬಗ್ಗೆ ‘ವುಮನ್ ಹೂ ಕ್ಯಾಂಟ್ ಫರ್ಗೆಟ್'(Woman Who Can’t Forget) ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಅದರಲ್ಲಿ ತಮ್ಮ ಅನಾರೋಗ್ಯದ ಬಗ್ಗೆ ಹಲವು ವಿಷಯಗಳನ್ನು ತಿಳಿಸಿದ್ದಾರೆ.

ಈ ಅನಾರೋಗ್ಯದ ಕಾರಣ, ಜಿಲ್ ಹಳೆಯ ನೆನಪುಗಳ ಬಗ್ಗೆ ಚಿಕ್ಕ ವಿವರಗಳನ್ನು ಸಹ ಹೇಳಬಹುದು. ಆದ್ದರಿಂದ ಇತರರು ಇದು ವಾಸ್ತವವಾಗಿ ಒಂದು ರೋಗವಲ್ಲ, ಒಂದು ಆಶೀರ್ವಾದ ಎಂದು ಭಾವಿಸಬಹುದು ಅನ್ನುತ್ತಾರೆ. ಆದರೆ ಜಿಲ್ ಹಾಗೆ ಯೋಚಿಸುವುದಿಲ್ಲ. ಅವಳ ಆಸೆಯ ಹೊರತಾಗಿಯೂ, ಅವಳನ್ನು ಮರೆಯಲಾಗಲಿಲ್ಲ. ಕ್ಯಾಲಿಫೋರ್ನಿಯಾ(california)-ಇರ್ವಿನ್ ವಿಶ್ವವಿದ್ಯಾಲಯದ ಸಂಶೋಧಕರು ಜಿಲ್‌ನ ತೀಕ್ಷ್ಣವಾದ ಸ್ಮರಣೆಯ ಹಿಂದಿನ ರಹಸ್ಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ವಿಜ್ಞಾನಿಗಳು 2000 ಇಸವಿಯಿಂದಲೇ ಆಕೆಯ ಮೆದುಳಿನ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ಇನ್ನು ಜಗತ್ತಿನಲ್ಲಿ ಈ ರೀತಿಯ ಕಾಯಿಲೆ ಇರುವ ಇತರ ಜನರಿದ್ದಾರೆ. ವಿಸ್ಮೃತಿಯು ವ್ಯಕ್ತಿಯನ್ನು ಹೇಗೆ ಬಾಧಿಸುತ್ತದೆಯೋ ಹಾಗೆಯೇ ಜ್ಞಾಪಕ ಶಕ್ತಿ ನಷ್ಟವಾಗುತ್ತದೆ. ಕೆಲವು ನೆನಪುಗಳನ್ನು ಮೆದುಳಿನಿಂದ ಅಳಿಸಿ ಹಾಕಬೇಕು. ಅದರಲ್ಲೂ ಜೀವನದಲ್ಲಿ ಆಗುವ ಕೆಟ್ಟ ಘಟನೆಗಳನ್ನು ಮರೆಯಬೇಕು, ಆದರೆ ಅವರ ನೆನಪುಗಳು ಹಾಗೆಯೇ ಉಳಿದರೆ, ಅವರು ನರಳಬಹುದು. ಅದಕ್ಕಾಗಿಯೇ ಜಿಲ್ ಅವರು ಶಾರ್ಪ್ ಮೆಮೊರಿ ಡಿಸೀಸ್ ಬಗ್ಗೆ ತನ್ನ ಪುಸ್ತಕದ ಮೂಲಕ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ.

Advertisement