ಮಂಗಳವಾರ, 27 ಅಕ್ಟೋಬರ್ 2026
Trending

Old lock Use Tip : ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತೆ ಹಳೇ ಬೀಗ!

ಬೀಗಗಳು ತುಕ್ಕು ಹಿಡಿಯುತ್ತವೆ, ಆದ್ದರಿಂದ ತುಕ್ಕು ಹಿಡಿದ ಕಬ್ಬಿಣದ ಬೀಗಗಳನ್ನು ಎಂದಿಗೂ ಬಳಸಬಾರದು ಜಾತಕದಲ್ಲಿ ಶನಿ ಗ್ರಹವನ್ನು ದುರ್ಬಲಗೊಳಿಸುತ್ತದೆ.

Old lock

Old lock : ಬೀಗದ ಕೀ ಒಂದು ರಕ್ಷಾಕವಚ ಇದ್ದಂತೆ ಎಂದರೆ ತಪ್ಪಾಗಲಾರದು. ನಾವು ಹೆಚ್ಚಾಗಿ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಬೀಗದ ಕೀ ಯನ್ನು ನಂಬಿ ಹೋಗುತ್ತೇವೆ . ಅದೇ ಬೀಗದ ಕೀ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ತಿಳಿಯೋಣ.
ಅದರಲ್ಲೂ ಹಳೆಯ ಬೀಗದ ಕೀ ಬಗ್ಗೆ ಇಲ್ಲಿ ತಿಳಿಸಲಾಗಿದೆ.

Sponsored

ಅನೇಕ ಬಾರಿ ಜನರು ಹಳೆಯ ಬೀಗದ ಕೀ (Old lock)ಮಾರುತ್ತಾರೆ ಅಥವಾ ಬಿಸಾಡುತ್ತಾರೆ, ಆದರೆ ಈ ಕೆಲಸವನ್ನು ಎಂದಿಗೂ ಮಾಡಬಾರದು, ಇದರಿಂದ ಶನಿದೇವನ ತೊಂದರೆ ಅನುಭವಿಸಬೇಕಾಗಬಹುದು.

Advertisement
Advertisement

ಅನೇಕ ಬಾರಿ ಬೀಗಗಳು ತುಕ್ಕು ಹಿಡಿಯುತ್ತವೆ, ಆದ್ದರಿಂದ ತುಕ್ಕು ಹಿಡಿದ ಕಬ್ಬಿಣದ ಬೀಗಗಳನ್ನು ಎಂದಿಗೂ ಬಳಸಬಾರದು. ಇದು ಜಾತಕದಲ್ಲಿ ಶನಿ ಗ್ರಹವನ್ನು ದುರ್ಬಲಗೊಳಿಸುತ್ತದೆ.

ನಿಮಗೆ ಕೆಟ್ಟ ಕನಸುಗಳಿದ್ದರೆ ಮತ್ತು ಸರಿಯಾಗಿ ನಿದ್ರೆ ಬರದಿದ್ದರೆ, ಹಳೆಯ ಬೀಗದ ಕೀ ತನ್ನ ದಿಂಬಿನ ಕೆಳಗೆ ಇಟ್ಟುಕೊಂಡರೆ ಉತ್ತಮ ನಿದ್ರೆ ಬರುತ್ತದೆ ಎನ್ನಲಾಗುತ್ತದೆ.

ಶನಿಯ ಮಹಾದಶಾವನ್ನು ಕಡಿಮೆ ಮಾಡಲು ಹಳೆಯ ಬೀಗಗಳನ್ನು ಸಹ ಬಳಸಲಾಗುತ್ತದೆ. ಇದಕ್ಕಾಗಿ, ನೀವು ಶನಿವಾರದಂದು ಶನಿದೇವನ ದೇವಸ್ಥಾನದಲ್ಲಿ ಹಳೆಯ ಬೀಗವನ್ನು ಅರ್ಪಿಸಬೇಕು.

ಇನ್ನು ಹೆಣ್ಣು ಮಕ್ಕಳ ಮದುವೆಗೆ ವಿಳಂಬವಾಗಿದ್ದರೆ ಆ ಹುಡುಗಿಯ ಹೆಸರಿನ ಹಳೆಯ ಬೀಗವನ್ನು ದೇವಸ್ಥಾನದಲ್ಲಿ ನೇತು ಹಾಕಬೇಕು. ಮಗಳ ಮದುವೆ ನಿಶ್ಚಯವಾಗುವವರೆಗೆ ಆ ಬೀಗ ತೆರೆಯಬಾರದು.

ಎಂದಿಗೂ ಶನಿವಾರದಂದು ಬೀಗವನ್ನು ಕೊಳ್ಳಬಾರದು ಮತ್ತು ನಿಮ್ಮ ಮನೆಯ ಬೀಗವನ್ನು ಯಾರಿಗೂ ನೀಡಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗಿದೆ.

ನೀವು ಯಾವುದಾದರೂ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಹಳೆಯ ಬೀಗವನ್ನು ನೋಡಿದ ನಂತರ ಹೊರಹೋಗಬೇಡಿ ಅಥವಾ ಅದನ್ನು ಅಶುಭವೆಂದು ಪರಿಗಣಿಸಿ.

ಹೌದು ಹಳೆಯ ಬೀಗದ ಕೀ ಎಂದು ಎಂದಿಗೂ ಕಡೆಗಣಿಸದಿರುವುದು ಉತ್ತಮ.

Advertisement

Comments are closed.