ಭಾನುವಾರ, 25 ಅಕ್ಟೋಬರ್ 2026
Trending

ಮಂಗಳೂರು: ಹಾಡಹಗಲೇ ಮನೆ ಬೀಗ ಒಡೆದು ₹ 15 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಮಂಗಳೂರಿನ ಅಳಕೆ ಕಂಬ್ಲ ಕ್ರಾಸ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಒಂದಕ್ಕೆ ಹಾಡು ಹಗಲೇ ನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಸೆಪ್ಟೆಂಬರ್ 28ರಂದು ನಡೆದಿದೆ.

Sponsored

ಅಳಕೆ ಕಂಬ್ಲ ಕ್ರಾಸ್ ರಸ್ತೆಯ ‘ಸಹಯೋಗ್ ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್’ ಎ-ವಿಂಗ್‌ನ ಫ್ಲ್ಯಾಟ್ ನಂಬರ್ 202ರ ನಿವಾಸಿ ವರ್ಷಾಬೆನ್ ಮಿಥಾಲ್‌ಭಾಯ್ ಎಂಬವರು ತಮ್ಮ ಮಗನೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಸೆಪ್ಟೆಂಬರ್ 28ರಂದು ಮಧ್ಯಾಹ್ನ 3:00 ಗಂಟೆಗೆ ಮಂಗಳೂರು ಕಾರ್ ಸ್ಟ್ರೀಟ್‌ ನ ಟೈಲರ್ ಅಂಗಡಿಗೆ ಮನೆಗೆ ಬೀಗ ಹಾಕಿ ತೆರಳಿದ್ದರು. ಬಳಿಕ ಸಂಜೆ 5:10 ಗಂಟೆಗೆ ವಾಪಸ್ ಮನೆಗೆ ಬಂದಾಗ, ಮನೆಯ ಮುಖ್ಯ ಬಾಗಿಲಿನ ಬೀಗವನ್ನು ಒಡೆದಿರುವುದು ಕಂಡುಬಂದಿದೆ. ಮನೆ ಪ್ರವೇಶಿಸಿ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಸುಮಾರು 181 ಗ್ರಾಂ ತೂಕದ ಚಿನ್ನಾಭರಣಗಳು (ಮೌಲ್ಯ ₹ 14,50,000/-) ನಗದು: ₹ 42,000/- ಗಡಿಯಾರಗಳು: 2 ಫಾಸ್ಟ್‌ಟ್ರ್ಯಾಕ್ ವಾಚ್‌ಗಳು (ಮೌಲ್ಯ ₹ 8,600/-) ಹಾಗೂ 1 ಟೈಟಾನ್ ವಾಚ್ (ಮೌಲ್ಯ ₹ 4,100/-) ಇತರ: ₹ 500/- ಮೌಲ್ಯದ ನೀಲಿ ಬಣ್ಣದ ಸೂಟ್‌ಕೇಸ್ ಒಟ್ಟಾರೆಯಾಗಿ ₹ 15 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಕಳ್ಳರು ದೋಚಿದ್ದಾರೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.