ಒಂದು ವರ್ಷದ ನಂತರ ಅಪ್ಪನ ಕ್ರೌರ್ಯ ಬಯಲು
Sponsoredಕೇರಳ ಕೋಝಿಕ್ಕೋಡ್‌ನ ಪೆರುವಾಯಲ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ನಾಲ್ಕು ತಿಂಗಳ ಮಗುವಿನ ಸಾವು ನೈಸರ್ಗಿಕವಲ್ಲ, ಅದೊಂದು ಕೊಲೆ ಎಂದು ತನಿಖೆಯಿಂದ ಬಯಲಾಗಿದೆ. ಮಗು ರಾತ್ರಿ ನಿರಂತರವಾಗಿ ಅಳುತ್ತಿದ್ದರಿಂದ ಮದ್ಯವಸ್ಯಸನಿ ತಂದೆಯೇ ಹಸುಳೆಯನ್ನು ಹೊಡೆದು ಕೊಂದಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.
Marriage AdSponsoredತಂದೆ ಶಿಜಿನ್ ಎನ್ನುವಾತನನ್ನು ಪೊಲೀಸರು ಬಂಧನ ಮಾಡಿದ್ದು, ಜೊತೆಗೆ ಈ ಕೊಲೆ ಕೃತ್ಯ ಮುಚ್ಚಲು ಸಹಕರಿಸಿದ ಮಗುವಿನ ತಾಯಿ ಅಂಜನಾಳನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ವಿವರ:
ಅ.1, 2025 ರಂದು ರಾತ್ರಿ ಮಗು ಎಚ್ಚರಗೊಂಡಿಲ್ಲ, ಮೂಗಿನಿಂದ ಕಫ ಬರುತ್ತಿದೆ ಎಂದು ಶಿಜಿನ್ ಮತ್ತು ಅಂಜನಾ ದಂಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಕೂಡಲೇ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಮಗು ಮೃತಪಟ್ಟಿತ್ತು.
ಮೊದಲಿಗೆ ಇದೊಂದು ಸಹಜ ಸಾವು ಎಂದು ದಂಪತಿ ಬಿಂಬಿಸಲು ಯತ್ನ ಮಾಡಿದ್ದರು. ಆದರೆ ಮರಣೊತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಮೇಲೆ ತೀವ್ರ ಹಲ್ಲೆಯ ಗುರುತು ಕಂಡು ಬಂದು, ಇದು ಸಹಜ ಸಾವಲ್ಲ, ಕೊಲೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು.
ತಾಯಿ ಅಂಜನಾಳನ್ನು ತೀವ್ರ ವಿಚಾರಣೆಗೊಳಪಡಿಸಿದ ಪೊಲೀಸರು, “ರಾತ್ರಿ ಮಗು ಅಳು ನಿಲ್ಲಿಸದಿದ್ದಕ್ಕೆ ಮದ್ಯದ ಅಮಲಿನಲ್ಲಿದ್ದ ಶಿಜಿನ್ ಮಗುವಿನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿ ಕೊಂದಿದ್ದಾನೆ” ಎಂದು ತಪ್ಪೊಪ್ಪಿಕೊಂಡಿದ್ದಾರೆ.




