ಉಡುಪಿ: ವಿಮಾ ಹಣ ಕೊಡಿಸುವುದಾಗಿ ನಂಬಿಸಿ ವೃದ್ಧೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಹಿರಿಯಡ್ಕ ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತನನ್ನು ಉಡುಪಿಯ ಸುಬ್ರಹ್ಮಣ್ಯ ನಗರದ ನಿವಾಸಿ, ಹೋಮ್ ನರ್ಸ್ ಕೆಲಸ ಮಾಡುತ್ತಿದ್ದ ಉಮೇಶ್ ಶೆಟ್ಟಿ (45) ಎಂದು ಗುರುತಿಸಲಾಗಿದೆ.
Sponsoredಸೆ. 13 ರಂದು ಬಾಂಬಿ ಹಾಂಡ್ತಿ ಎಂಬ ವೃದ್ಧೆಯ ಮನೆಗೆ ಬಂದ ಆರೋಪಿ, ನಿಮ್ಮ ಮಗ ಮೃತಪಟ್ಟಿದ್ದು, ಆತನ ವಿಮಾ ಹಣ ಕೊಡಿಸುತ್ತೇನೆ ಎಂದು ನಂಬಿಸಿ, ನಂತರ ಅದೇ ದಿನ ಮಧ್ಯಾಹ್ನ ಮತ್ತೆ ಮನೆಗೆ ಬಂದು ವೃದ್ಧೆ ಧರಿಸಿದ್ದ ಎರಡು ಪವನ್ ತೂಕದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ.
Marriage AdSponsoredಪ್ರಕರಣ ದಾಖಲು ಮಾಡಿಕೊಂಡ ಹಿರಿಯಡ್ಕ ಪೊಲೀಸರು ಅ.23 ರಂದು ಆರೋಪಿಯನ್ನು ಆತನ ಮನೆಯ ಸಮೀಪ ಬಂಧನ ಮಾಡಿ, ಕಳವು ಮಾಡಿದ್ದ 1.85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.




