ಭಾನುವಾರ, 25 ಅಕ್ಟೋಬರ್ 2026

ಸುಳ್ಯ; ಲಾರಿ-ಕಾರು ಡಿಕ್ಕಿ, ಬಾಲಕ ಸಾವು, ಹಲವರಿಗೆ ಗಾಯ

ಸುಳ್ಯ: ಗೂನಡ್ಕ ಶಾಲೆಯ ತಿರುವಿನ ಬಳಿ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಾಲಕ ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ.

Sponsored

ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಲಾರಿ ಗೂನಡ್ಕ ಶಾಲೆಯ ತಿರುವಿನ ಬಳಿ ಪರಸ್ಪರ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಬಾಲಕ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಇತರರಿಗೂ ಗಾಯಗಳಾಗಿದೆ.

Marriage AdMarriage AdSponsored

ಗಾಯಾಳುಗಳನ್ನು ಸುಳ್ಯದ ಆಂಬುಲೆನ್ಸ್‌ಗಳ ಮೂಲಕ ಕೆವಿಜಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿದ್ದವರು ಬಂಟ್ವಾಳ ತಾಲೂಕಿನವರು ಎಂದು ತಿಳಿದು ಬಂದಿದ್ದು, ಮೃತ ಬಾಲಕನ ಗುರುತು ಪತ್ತೆಯಾಗಿಲ್ಲ.