ಭಾನುವಾರ, 25 ಅಕ್ಟೋಬರ್ 2026
Trending

20ರ ಯುವತಿಯನ್ನು ಮದುವೆಯಾದ 72ರ ಫುಟ್‌ಬಾಲ್ ದಿಗ್ಗಜ!!

ಮಲೇಷ್ಯಾದ ಹಿರಿಯ ಹಾಗೂ ಖ್ಯಾತ ಮಾಜಿ ಫುಟ್‌ಬಾಲ್ ಆಟಗಾರ ಡಾಟುಕ್ ಅಬ್ದಾಹ್ ಅಲಿಫ್ (72) ಅವರು 20 ವರ್ಷದ ಯುವತಿಯನ್ನು ವಿವಾಹವಾಗಿ ಹೊಸ ಜೀವನ ಶುರು ಮಾಡಿದ್ದಾರೆ.

Sponsored

ಆಗಸ್ಟ್ 27 ರಂದು ಈ ಮದುವೆ ನಡೆದಿದ್ದು, ಅಬ್ದಾಹ್ ಅವರ ಸಹೋದರ ಹಾಗೂ ಮಲೇಷ್ಯಾ ರಾಷ್ಟ್ರೀಯ ತಂಡದ ಮಾಜಿ ಕೋಚ್ ಆಗಿರುವ ಡಾಟುಕ್ ಯೂನುಸ್ ಅಲಿಫ್ ಈ ಸುದ್ದಿಯನ್ನು ದೃಢಪಡಿಸಿದ್ದು, ವಿವಾಹದ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ಯೂನುಸ್, ಆಗಸ್ಟ್ 27 ರಂದು ಇಬ್ಬರ ಮದುವೆ ನಡೆದಿದೆ. ಎರಡೂ ಕುಟುಂಬದವರ ಸಮ್ಮತಿ ಮತ್ತು ಆಶೀರ್ವಾದದೊಂದಿಗೆ ಈ ವಿವಾಹ ನಡೆದಿದ್ದು, ನವಜೋಡಿಗೆ ಶುಭ ಹಾರೈಸುತ್ತೇವೆ. ಈಗ ಅವರಿಬ್ಬರೂ ಸದ್ಯ ಹನಿಮೂನ್‌ನಲ್ಲಿರಬಹುದು. ಇಬ್ಬರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ,” ಎಂದಿದ್ದಾರೆ.

ಅಂದಹಾಗೆ ಮಲೇಷ್ಯಾ ಫುಟ್‌ಬಾಲ್ ಇತಿಹಾಸದಲ್ಲಿ ಅಬ್ದಾಹ್ ಅಲಿಫ್ ಪ್ರಮುಖ ಹೆಸರು. 1970 ಮತ್ತು 80ರ ದಶಕದ ಮಲೇಷ್ಯಾದ ಸುವರ್ಣ ಯುಗದಲ್ಲಿ ಅವರು ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರಾಗಿದ್ದರು.