ಭಾನುವಾರ, 25 ಅಕ್ಟೋಬರ್ 2026
Trending

ಪ್ರಪಂಚದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು?

ಇಡೀ ಪ್ರಪಂಚದಲ್ಲಿಯೇ ಅತಿ ಹೆಚ್ಚು ಸಂಬಳವನ್ನು ಪಡೆಯುವ ಪ್ರಧಾನಿ ಯಾರು ಎಂಬ ವಿಚಾರ ಜನರಲ್ಲಿ ಬಾರಿ ಕುತೂಹಲ ಕೆರಳಿಸಿತ್ತು. ಅನೇಕರು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ಪುಟಿನ್ ಅಥವಾ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಈ ಸಾಲಿನಲ್ಲಿ ಇರಬಹುದು ಎಂದು ಭಾವಿಸಿದ್ದರು. ಆದರೆ ಇವರ್ಯಾರು ಕೂಡ ಅತಿ ಹೆಚ್ಚು ಸಂಬಳವನ್ನು ಗಳಿಸುವುದಿಲ್ಲ. ಹಾಗಿದ್ದರೆ ಹೆಚ್ಚು ಸಂಭಾವನೆ ಪಡೆಯುವ ಪ್ರಧಾನಿ ಯಾರು ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ.

Sponsored

ಇತ್ತೀಚಿಗಷ್ಟೇ ಸಿಂಗಾಪುರ ಪ್ರಧಾನಿ ಲಾರೆನ್ಸ್ ವೋಂಗ್ (lawrence Wong) ಮತ್ತು ಅವರ ಸಂಪುಟದ ಸಚಿವರಿಗೆ ಭಾರಿ ವೇತನ ಹೆಚ್ಚಳ ಘೋಷಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಸಿಂಗಾಪುರದ ಪ್ರಧಾನಿಯವರೇ ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕನಾಗಿ ಹೊರಹೊಮ್ಮಿದ್ದಾರೆ.

ಹೌದು, ಸಿಂಗಾಪುರ ಪ್ರಧಾನಿಯವರ ವಾರ್ಷಿಕ ಮೂಲ ವೇತನವು 2.2 ಮಿಲಿಯನ್ ಸಿಂಗಾಪುರ ಡಾಲರ್‌ಗಳಿಂದ (ಸುಮಾರು 1.61 ಕೋಟಿ ರೂಪಾಯಿ) ನೇರವಾಗಿ 3.6 ಮಿಲಿಯನ್ ಸಿಂಗಾಪುರ ಡಾಲರ್‌ಗೆ ಏರಿಕೆಯಾಗಲಿದೆ. ಭಾರತದ ರೂಪಾಯಿ ಪ್ರಕಾರ ಸುಮಾರು 34 ಕೋಟಿ ಅಷ್ಟಾಗುತ್ತದೆ. ಇದರಿಂದಾಗಿ ಅವರ ವಾರ್ಷಿಕ ವೇತನದಲ್ಲಿ ಅಂದಾಜು 1 ಮಿಲಿಯನ್ ಯುಎಸ್ ಡಾಲರ್‌ಗಿಂತಲೂ ಅಧಿಕ ಹೆಚ್ಚಳವಾಗಲಿದೆ. ಆದರೆ, ಈ ರೀತಿ ತಮಗೆ ಸಿಗುವ ಹೆಚ್ಚುವರಿ ವೇತನದ ಸಂಪೂರ್ಣ ಹಣವನ್ನು ತಾವು ಅಧಿಕಾರದಲ್ಲಿರುವ ಅವಧಿಯಲ್ಲಿ ಸೂಕ್ತ ಸಾಮಾಜಿಕ ಸೇವಾ ಕಾರ್ಯಗಳಿಗೆ ಮತ್ತು ಜನಪರ ಕೆಲಸಗಳಿಗೆ ದೇಣಿಗೆಯಾಗಿ ನೀಡುವುದಾಗಿ ಪ್ರಧಾನಿ ವೋಂಗ್ ಘೋಷಿಸಿದ್ದಾರೆ.

ಪ್ರಧಾನಿ ಮಾತ್ರವಲ್ಲದೆ ಉಪಪ್ರಧಾನಿ ಮತ್ತು ಸಚಿವರ ವೇತನದಲ್ಲೂ ಗಮನಾರ್ಹ ಏರಿಕೆ ಮಾಡಲಾಗಿದೆ. ಉಪಪ್ರಧಾನಿಯವರ ಮೂಲ ವೇತನವು 1.87 ಮಿಲಿಯನ್ ಸಿಂಗಾಪುರ ಡಾಲರ್‌ನಿಂದ 3.06 ಮಿಲಿಯನ್ ಸಿಂಗಾಪುರ ಡಾಲರ್‌ಗೆ ಏರಿಕೆಯಾಗಲಿದ್ದು, ಸಂಪುಟದ ಇತರೆ ಸಚಿವರ ವೇತನವು ಅವರ ಹಿರಿಮೆ ಮತ್ತು ವಹಿಸಿಕೊಂಡಿರುವ ಇಲಾಖೆಗಳ ಜವಾಬ್ದಾರಿಗೆ ಅನುಗುಣವಾಗಿ 1.80 ಮಿಲಿಯನ್‌ನಿಂದ 2.88 ಮಿಲಿಯನ್ ಸಿಂಗಾಪುರ ಡಾಲರ್‌ಗಳಷ್ಟಾಗಲಿದೆ.

ಸುಮಾರು 15 ವರ್ಷಗಳ ಬಳಿಕ ಸಿಂಗಾಪುರದಲ್ಲಿ ನಾಯಕರ ಸಂಬಳವನ್ನು ಪರಿಷ್ಕರಣೆ ಮಾಡಲಾಗಿದೆ. ಹೀಗಾಗಿ ಸಿಂಗಾಪುರದಲ್ಲಿ ರಾಜಕಾರಣಿಗಳ ವೇತನವು ಈಗಾಗಲೇ ಅಮೆರಿಕ ಸೇರಿದಂತೆ ಜಿ7 ಒಕ್ಕೂಟದ ಪ್ರಮುಖ ದೇಶಗಳ ನಾಯಕರ ವೇತನಕ್ಕಿಂತಲೂ ಅತ್ಯಂತ ಹೆಚ್ಚಾಗಿದೆ.