ಉಪ್ಪಿನಂಗಡಿ: ಕುಡಿತದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ಬಾರ್‌ವೊಂದರ ಬಳಿ ಬಿದ್ದು ಮೃತಪಟ್ಟ ಘಟನೆ ಅ.16 ರಂದು ಬೆಳಕಿಗೆ ಬಂದಿದೆ.
Sponsoredಪುತ್ತೂರು ಕೆಮ್ಮಿಂಜೆ ಗ್ರಾಮದ ನೈತಾಡಿ ನಿವಾಸಿ ನಾಗೇಶ್ ಸಪಲ್ಯ (56 ವ) ಮೃತ ವ್ಯಕ್ತಿ. ಈ ಕುರಿತು ಅವರ ಪುತ್ರ ಚೇತನ್ ಉಪ್ಪಿನಂಗಡಿ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಅ.15 ರಂದು ಉಪ್ಪಿನಂಗಡಿಯ ಬಳಿ ಬಿದ್ದು ಮೃತಪಟ್ಟಿದ್ದು, ಕುಡಿತದ ಚಟ ಇದ್ದಿದ್ದರಿಂದಲೇ ಯಾವುದೋ ಖಾಯಿಲೆ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ತಿಳಿಸಿದ್ದಾರೆ.




