ಶನಿವಾರ, 24 ಅಕ್ಟೋಬರ್ 2026

ಉಡುಪಿ: ಕೊಬ್ಬರಿ ಘಟಕದಲ್ಲಿ ಭೀಕರ ಅಗ್ನಿ ಅವಘಡ

ಕಟಪಾಡಿ: ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುರ್ಕಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಭಾಷ್‌ ನಗರದಲ್ಲಿರುವ ನಳಿನಿ ಪುಷ್ಪಲತಾ ಸಾಲಿನ್ಸ್‌ ಅವರ ಮಾಲೀಕತ್ವದ ಕೊಬ್ಬರಿ ಘಟಕದಲ್ಲಿ ಶನಿವಾರ (ಸೆ.19) ನಸುಕಿನ ಜಾವ ಎರಡು ಗಂಟೆಗೆ ಆಕಸ್ಮಿಕ ಅಗ್ನಿ ಅವಘಡ ನಡೆದಿದೆ.

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ದಾಸ್ತಾನು ಬೆಂಕಿಗಾಹುತಿಯಾಗಿದೆ. ಉಡುಪಿ ಅಗ್ನಿಶಾಮಕ ಠಾಣೆಯ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅಪಾರ ಪ್ರಮಾಣದ ಕೊಬ್ಬರಿ ಬೆಂಕಿಗೆ ಅಹುತಿಯಾಗಿದ್ದು, ಅಂದಾಜು 10-15 ಲಕ್ಷ ರೂ. ನಷ್ಟ ಸಂಭವಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.