ಶನಿವಾರ, 24 ಅಕ್ಟೋಬರ್ 2026

ಚಾಟ್‌ಜಿಪಿಟಿ ಬಳಸಿ ಪರೀಕ್ಷೆ ಬರೆಯಲು ಯತ್ನ-ಸಿಕ್ಕಿಬಿದ್ದ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್‌ ಬಳಕೆ ಮಾಡಿ ಚಾಟ್‌ ಜಿಪಿಟಿ ಮೂಲಕ ಉತ್ತರ ಬರೆಯಲೆತ್ನಿಸಿ ಆರೋಪದ ಬೆನ್ನಲ್ಲೇ ಐಐಟಿ ಬಾಂಬೆಯ ದ್ವಿತೀಯ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಹಿಲ್‌ ವಕೋಡೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಎನರ್ಜಿ ಸೈನ್ಸ್‌ & ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿ ಪರೀಕ್ಷೆ ವೇಳೆ ಮೊಬೈಲ್‌ ಬಳಕೆ ಮಾಡಿ ಪ್ರಶ್ನೆಪತ್ರಿಕೆಯನ್ನು ಎಐಗೆ ಅಪ್ಲೋಡ್‌ ಮಾಡಿ ಉತ್ತರ ಪಡೆಯಲೆತ್ನಿಸಿದಾಗ, ಪ್ರೊಫೆಸರ್‌ ಕೈಗೆ ಸಿಕ್ಕಿಬಿದ್ದಿದ್ದ. ಆತನ ಕರಿಯರ್‌ ಮೇಲೆ ಪರಿಣಾಮ ಬೀರೋದು ಬೇಡ ಎಂದು ಶಿಸ್ತುಕ್ರಮ ಕೈಗೊಂಡಿಲ್ಲ. ಆದರೆ ಈ ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ವಿದ್ಯಾರ್ಥಿ, ಹಾಸ್ಟೆಲ್‌ಗೆ ತೆರಳಿದ್ದು ಅಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.