ಸೋಮವಾರ, 26 ಅಕ್ಟೋಬರ್ 2026
Trending

ಉಡುಪಿ: ಮಾದಕ ವಸ್ತು ಮಾರಾಟಕ್ಕೆ ಯತ್ನ, ಆರೋಪಿಯ ಬಂಧನ

Image Credit: Public Tv
Advertisement

ಉಡುಪಿ: ನಗರದ ಅಜ್ಜರಕಾಡು ಭುಜಂಗ ಪಾರ್ಕ್‌ ಬಳಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನ ಮಾಡಿದ ಆರೋಪದಡಿಯಲ್ಲಿ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ.

Sponsored

ಉದ್ಯಾವರದ ಅಂಕುದ್ರು ನಿವಾಸಿ ವಿಜಯ್‌ ಅಲಿಯಾಸ್‌ ವಿಜಯ್‌ ಪೂಜಾರಿ (36) ಬಂಧಿತ ಆರೋಪಿ.

Advertisement
Advertisement

ಆರೋಪಿಯಿಂದ 17.66 ಗ್ರಾಂ ತೂಕದ ಎಂಡಿಎಂಎ ಮಾದಕವಸ್ತುವಿನ ಒಂಭತ್ತು ಜಿಪ್‌ ಕವರ್‌ಗಳು, 2.18 ಗ್ರಾಂ ತೂಕದ ಬಣ್ಣದ ಮಾತ್ರೆ ಹಾಗೂ ಪುಡಿ, ತೂಕದ ಯಂತ್ರ, ಮೊಬೈಲ್‌ ಫೋನ್‌ ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟರ್‌ ಸೇರಿ ವಿವಿಧ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 85 ಸಾವಿರ ರೂ. ಎಂದು ತಿಳಿದು ಬಂದಿದೆ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಎರಡು ಪ್ರಕರಣಗಳು ಸೇರಿ ಒಟ್ಟು ನಾಲ್ಕು ಪ್ರಕರಣಗಳು ವಿಜಯ್‌ ವಿರುದ್ಧ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement
div class="ere-sticky">