ಸೋಮವಾರ, 26 ಅಕ್ಟೋಬರ್ 2026
Trending

ಕೆ ಎಸ್‌ ಈಶ್ವರಪ್ಪಗೆ ಜೀವ ಬೆದರಿಕೆ ಕರೆ, ದೂರು ದಾಖಲು

K S Eshwarappa
Advertisement

ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪಗೆ ಜೀವ ಬೆದರಿಕೆ ಕರೆ ಬಂದಿದ್ದು, ಈ ಕುರಿತು ಶಿವಮೊಗ್ಗ ಎಸ್‌ಪಿ ನಿಖಿಲ್‌ಗೆ ದೂರನ್ನು ನೀಡಿದ್ದಾರೆ. ಅ.17 ರ ರಾತ್ರಿ 8.49ಕ್ಕೆ ರಿಜ್ವಾನ್‌ ಬೇಗ್‌ ಎಂಬುವವನಿಂದ ಈಶ್ವರಪ್ಪಗೆ ಕರೆ ಬಂದಿದ್ದು, ನಂತರ ರಾತ್ರಿ 10.49ಕ್ಕೆ ಫರಾನ್‌ ರಶೀದ್‌ ಎಂಬಾತ ಬೆದರಿಕೆ ಕರೆ ಮಾಡಿದ್ದ. ಇಬ್ಬರೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಾಗಾಗಿ ತಮಗೂ ಹಾಗೂ ಕುಟುಂಬಕ್ಕೆ ತೀವ್ರ ಆತಂಕ ಉಂಟಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಈಶ್ವರಪ್ಪ ಆಗ್ರಹ ಮಾಡಿದ್ದಾರೆ.

Sponsored
Advertisement
Advertisement
Advertisement
div class="ere-sticky">