ಮಂಗಳವಾರ, 27 ಅಕ್ಟೋಬರ್ 2026
Trending

‘ಹಲೋ’ ಅಂದ ತಕ್ಷಣ ಫೋನ್ ಕಟ್ ಆದರೆ ಹುಷಾರ್ – ಇದು ಹೊಸ ಸೈಬರ್ ಸ್ಕ್ಯಾಮ್, ಹೀಗೆ ದೂರು ನೀಡಿ!!

ದಿನ ಕಳೆದಂತೆ ಸೈಬರ್ ವಂಚಕರ ಹಾವಳಿ ಜೋರಾಗಿದೆ. ಒಂದಲ್ಲ ಒಂದು ಸೋಗಿನಲ್ಲಿ ಬಂದು ಜನರ ಬಳಿ ಹಣವನ್ನು ಪೀಕುತಿದ್ದಾರೆ. ಈ ಬಗ್ಗೆ ಪ್ರತಿನಿತ್ಯ ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇದ್ದೇವೆ. ದಿನ ಕಳೆದಂತೆ ಹೊಸ ಹೊಸ ಪ್ಲಾನ್ ಉಪಯೋಗಿಸಿ ಹಣ ದೋಚುತಿರುವ ಸೈಬರ್ ವಂಚಕರು ಇದೀಗ ಫೋನ್ ಕಾಲ್ ಒಂದನ್ನು ಮಾಡಿ ಹಣಗಳಿಸಲು ಮುಂದಾಗಿದ್ದಾರೆ.

Sponsored

ಯಾವುದೋ ಒಂದು ಅಪರಿಚಿತ ನಂಬರ್ ನಿಂದ ಕರೆ ಬಂದು ರಿಸೀವ್ ಮಾಡಿ ‘ಹಲೋ’ ಎನ್ನುತ್ತಿದ್ದಂತೆ ಫೋನ್ ಕಟ್ ಆಗಿಬಿಡುತ್ತದೆ. ಸಾಮಾನ್ಯವಾಗಿ ನಾವು ಇದನ್ನು ನೆಟ್ವರ್ಕ್ ಸಮಸ್ಯೆ ಅಥವಾ ರಾಂಗ್ ನಂಬರ್ ಎಂದುಕೊಂಡು ಸುಮ್ಮನಾಗುತ್ತೇವೆ. ಆದರೆ ಜಾಗರೂಕರಾಗಿರಿ! ಇದು ಕೇವಲ ತಾಂತ್ರಿಕ ದೋಷವಲ್ಲ, ಬದಲಿಗೆ ‘ಸೈಲೆಂಟ್ ಕಾಲ್ ಸ್ಕ್ಯಾಮ್’ ಎಂಬ ಹೊಸ ಮಾದರಿಯ ಸೈಬರ್ ವಂಚನೆಯಾಗಿದೆ.

Advertisement
Advertisement

ಹೌದು, ಫೋನ್ ಬಂದಾಗ ರಿಸೀವ್ ಮಾಡಿದ ವೇಳೆ ಹಲೋ ಎಂದ ತಕ್ಷಣ ಕಾಲ್ ಕಟ್ ಆದರೆ ಅದು ವಂಚನೆಯ ಕರೆಯೆಂದು ಭಾವಿಸಿ. ಸ್ಕ್ಯಾಮರ್ಗಳು ಏಕಕಾಲದಲ್ಲಿ ಸಾವಿರಾರು ನಂಬರ್ಗಳಿಗೆ ಇಂತಹ ಕರೆಗಳನ್ನು ಮಾಡುತ್ತಾರೆ. ನಿಮ್ಮೊಂದಿಗೆ ಮಾತನಾಡುವುದು ಅವರ ಉದ್ದೇಶವಾಗಿರುವುದಿಲ್ಲ. ಬದಲಿಗೆ, ನಿಮ್ಮ ಮೊಬೈಲ್ ನಂಬರ್ ಸಕ್ರಿಯವಾಗಿದೆಯೇ (Active) ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚುವುದು ಇವರ ಮುಖ್ಯ ಆಟವಾಗಿರುತ್ತದೆ.

ನೀವು ಕರೆ ಸ್ವೀಕರಿಸಿ ‘ಹಲೋ’ ಎಂದು ಹೇಳುತ್ತಿದ್ದಂತೆ, ಲೈನ್ನಲ್ಲಿ ಮನುಷ್ಯರೇ ಇದ್ದಾರೆ ಎಂಬುದನ್ನು ಆ ಮೆಷಿನ್ ಗುರುತಿಸಿ ತಕ್ಷಣ ಕರೆಯನ್ನು ಕಡಿತಗೊಳಿಸುತ್ತದೆ. ತದನಂತರ ನಿಮ್ಮ ನಂಬರ್ ಅವರ ‘ಆಕ್ಟಿವ್ ನಂಬರ್ಸ್’ ಲಿಸ್ಟ್ ಸೇರಿಕೊಳ್ಳುತ್ತದೆ.

ಈ ಕರೆ ಬಂದ್ರೆ ನಿಮಗೆ ಮುಂದಿನ ಅಪಾಯಗಳು ಶುರುವಾಗುತ್ತವೆ:

ಸೈಬರ್ ವಂಚನೆಯ ಕರೆಗಳ ಮಹಾಪೂರ: ನಿಮ್ಮ ನಂಬರ್ಗೆ ಸರಣಿ ವಂಚನೆಯ ಕರೆಗಳು ಬರಲು ಆರಂಭವಾಗುತ್ತವೆ.

ಡಿಜಿಟಲ್ ಅರೆಸ್ಟ್ ಭೀತಿ: ನಿಮ್ಮನ್ನು ಹೆದರಿಸಿ ‘ಡಿಜಿಟಲ್ ಅರೆಸ್ಟ್’ (Digital Arrest) ಮಾಡುವ ಮೂಲಕ ಹಣ ವಸೂಲಿ ಮಾಡಲು ಯತ್ನಿಸಬಹುದು.

ಬ್ಯಾಂಕ್ ಖಾತೆಗೆ ಕನ್ನ: ಲಾಟರಿ ಆಮಿಷ ಅಥವಾ ಬ್ಯಾಂಕ್ ಮಾಹಿತಿ ಕದಿಯುವ ಮೂಲಕ ನಿಮ್ಮ ಖಾತೆಯಲ್ಲಿರುವ ಹಣವನ್ನು ಲೂಟಿ ಮಾಡುವ ಸಾಧ್ಯತೆ ಇರುತ್ತದೆ.

ದೂರು ನೀಡುವುದು ಎಲ್ಲಿ ಮತ್ತು ಹೇಗೆ?

ಯಾವುದಾದರೂ ನಂಬರ್ ನಿಮಗೆ ಸಂಶಯಾಸ್ಪದವಾಗಿ ಕಂಡರೆ ಅಥವಾ ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ ತಕ್ಷಣವೇ ವರದಿ ಮಾಡಿ

ಭಾರತ ಸರ್ಕಾರದ ಅಧಿಕೃತ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ (National Cyber Crime Portal) ಗೆ ಭೇಟಿ ನೀಡಿ.

ಅಲ್ಲಿನ ‘Check & Report’ ಸೆಕ್ಷನ್ ಹೋಗಿ ಆ ನಂಬರ್ ವಿರುದ್ಧ ದೂರು ದಾಖಲಿಸಿ.

ಅಥವಾ ತಕ್ಷಣವೇ ಸೈಬರ್ ಹೆಲ್ಪ್ಲೈನ್ ನಂಬರ್ 1930 ಗೆ ಕರೆ ಮಾಡಿ ದೂರು ನೀಡಿ.

Advertisement