ಸೋಮವಾರ, 26 ಅಕ್ಟೋಬರ್ 2026
Trending

ದಾಂಡಿಯಾ ನೈಟ್‌ ವೇಳೆ ಭೀಕರ ದುರಂತ

Dandiya Dance

ನಾದರ್‌ಗುಲ್‌ನಲ್ಲಿರುವ ಎಂವಿಎಸ್‌ಆರ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜನೆ ಮಾಡಲಾಗಿದ್ದ ದಾಂಡಿಯಾ ನೈಟ್‌ ವೇಳೆ, ವಿದ್ಯುತ್‌ ದೀಪ ಅಳವಡಿಸಿದ್ದ ಸ್ಟ್ಯಾಂಡ್‌ ಕುಸಿದು ಬಿದ್ದ ಪರಿಣಾಮ, 18 ವರ್ಷದ ವಿದ್ಯಾರ್ಥಿನಿ ಸೋನಾ ಮೃತಪಟ್ಟಿದ್ದು, 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಹೈದರಾಬಾದ್‌ ಸಮೀಪದ ರಂಗಾರೆಡ್ಡಿಯಲ್ಲಿ ನಡೆದಿದೆ.

Sponsored

ಘಟನೆ ನಡೆದ ಸಂದರ್ಭದಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದು, ನೃತ್ಯ ಮಾಡುತ್ತಿದ್ದರು.

Advertisement

ತೆಲಂಗಾಣ ಸಿಎಂ ಎ ರೇವಂತ್‌ ರೆಡ್ಡಿ ಅವರು ವಿದ್ಯಾರ್ಥಿನಿ ಸೋನಾ ಅವರ ಸಾವಿಗೆ ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಗಾಯಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಈವೆಂಟ್‌ ಆಯೋಜಕರು, ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.