ಶನಿವಾರ, 24 ಅಕ್ಟೋಬರ್ 2026

ಸೆ. 21 ರಿಂದ ರಾಜ್ಯದಲ್ಲಿ 3 ದಿನಗಳ ಕಾಲ ವಿಶೇಷ ಅಧಿವೇಶನ!!

Governor of Karnataka Vajubhai Vala addressing the joint session at Vidhana Soudha, in Bengaluru on Monday 17th February 2020 Pics: www.pics4news.com

ಸೆ.21ರಿಂದ ಮತ್ತೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.

 ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂರು ದಿನಗಳ ಕಾಲ ವಿಶೇಷ ವಿಧಾನಸಭಾ ಅಧಿವೇಶನವನ್ನು ನಡೆಸಬೇಕು ಎಂಬುದಕ್ಕೆ ಒಪ್ಪಿಗೆ ನೀಡಲಾಗಿದೆ. ಸೆಪ್ಟೆಂಬರ್ 21ರಿಂದ 23ರ ವರೆಗೆ ಒಟ್ಟು ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದೆ. 

ಡಾ. ಕೆ. ಕಸ್ತೂರಿ ರಂಗನ್‌ ವರದಿಆಧರಿಸಿ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಲು ಕೇಂದ್ರ ಸರಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಕುರಿತು ರಾಜ್ಯ ಸರಕಾರದ ಆಕ್ಷೇಪ ಹಾಗೂ ನಿಲುವು ಸ್ಪಷ್ಟಪಡಿಸುವ ಮುನ್ನ, ಪಶ್ಚಿಮ ಘಟ್ಟ ಭಾಗದ ಜನಪ್ರತಿನಿಧಿಗಳೊಂದಿಗೆ ಸಮಗ್ರ ಚರ್ಚೆ ನಡೆಸಲು ಈ ಅಧಿವೇಶನ ವೇದಿಕೆಯಾಗಲಿದೆ. ಕಳೆದ ಅಧಿವೇಶನದಲ್ಲಿ ಗದ್ದಲದಿಂದಾಗಿ ಬರಗಾಲದ ಬಗ್ಗೆ ಚರ್ಚೆ ನಡೆದಿರಲಿಲ್ಲ.

ರಾಜ್ಯದ ಬಹುಭಾಗದಲ್ಲಿ ಬರದಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಂಕಷ್ಟ ಎದುರಾಗಿದ್ದು, ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರೈತರ ಸಂಕಷ್ಟ ಹಾಗೂ ಅನಾವೃಷ್ಟಿ ನಿಭಾಯಿಸುವ ಕುರಿತು ಶಾಸನಸಭೆಯಲ್ಲಿ ಚರ್ಚಿಸುವುದು ಅನಿವಾರ್ಯವಾಗಿದೆ. ಸರಕಾರಿ ಉದ್ಯಾನವನಗಳು ಹಾಗೂ ತೋಟಗಾರಿಕೆ ಫಾಮ್‌ರ್‍ಗಳ ಶೇ.5ರಷ್ಟು ಜಾಗವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಪರಭಾರೆ ಮಾಡಲು ತರಾತುರಿಯಲ್ಲಿ ತಿದ್ದುಪಡಿ ವಿಧೇಯಕವನ್ನು ಮಂಜೂರು ಮಾಡಿಸಿ ಕೊಂಡಿರುವುದಕ್ಕೆ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಗಿದೆ.ಈ ನಿರ್ಧಾರದ ಬಗ್ಗೆ ಸದನದಲ್ಲಿ ಮತ್ತೊಮ್ಮೆ ವಿಸ್ತೃತ ಚರ್ಚೆ ನಡೆಸಿ ಸ್ಪಷ್ಟನೆ ನೀಡಲು ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ.