ಭಾನುವಾರ, 25 ಅಕ್ಟೋಬರ್ 2026

ಎಸ್‌ಐಆರ್‌: ಕರ್ನಾಟಕದ 43.8 ಲಕ್ಷ ಮತದಾರರಿಗೆ ಶೀಘ್ರವಾಗಿ ಬರಲಿದೆ ನೋಟಿಸ್‌

ಕರ್ನಾಟಕದ ಮತದಾರರ ಪಟ್ಟಿ ಸುಧಾರಣೆಗಾಗಿ ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಸುಮಾರು 43.8 ಲಕ್ಷ ಮತದಾರರಿಗೆ ವಿಶೇಷ ಸಾಂದ್ರ ಪರಿಷ್ಕರಣೆ (ಎಸ್‌ಐಆರ್‌) ಅಡಿಯಲ್ಲಿ ನೋಟಿಸ್‌ ನೀಡಲು ಸಿದ್ಧತೆ ನಡೆಸಿದೆ. ಆಗಸ್ಟ್‌ 24 ರಿಂದ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ.

Sponsored
  1. 2002ರ ಮತದಾರರ ಡೇಟಾಗೆ ಮ್ಯಾಪ್‌ ಮಾಡಲು ಸಾಧ್ಯವಾಗದ ಮತದಾರರು
  2. 2. 2002 ರ ಪಟ್ಟಿಯೊಂದಿಗೆ ಮ್ಯಾಪ್‌ ಆಗಿದ್ದರೂ ತಂದೆಯ ಹೆಸರಿನ ಸ್ಪೆಲ್ಲಿಂಗ್‌ ವ್ಯತ್ಯಾಸ ಸೇರಿದಂತೆ ಸುಮಾರು 9 ರೀತಿಯ ತಾಂತ್ರಿಕ ದೋಷಗಳು ಕಂಡು ಬಂದಿರುವ ಮತದಾರರು

ಮುಖ್ಯವಾಗಿ ಈ ಎರಡು ವರ್ಗದ ಮತದಾರರಿಗೆ ನೋಟಿಸ್‌ ಜಾರಿಯಾಗಲಿದೆ.

Marriage AdMarriage AdSponsored

ಖಾಸಗಿತನದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಮತಗಟ್ಟೆ (Booth) ಹಂತದಲ್ಲಿ ಪರಿಶೀಲನಾ ಪಟ್ಟಿ ಪ್ರಕಟಿಸುವ ಬಗ್ಗೆ ಆಯೋಗ ಚಿಂತಿಸುತ್ತಿದೆ. ನೋಟಿಸ್ ಸ್ವೀಕರಿಸುವ ಮತದಾರರು ನಿಗದಿತ ಸಮಯದೊಳಗೆ ತಮ್ಮ ದಾಖಲೆಗಳನ್ನು ಸಲ್ಲಿಸಿ ದೋಷಗಳನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ.