ಭಾನುವಾರ, 25 ಅಕ್ಟೋಬರ್ 2026

ಅಭ್ಯಾಸ್ ಪದವಿ ಪೂರ್ವ ಕಾಲೇಜು: “ಅಭ್ಯಾಸ್ ಕೆಸರ್ದಕಲ” ವಿಶೇಷ ಕಾರ್ಯಕ್ರಮ

ಅಭ್ಯಾಸ್ ಪದವಿ ಪೂರ್ವ ಕಾಲೇಜು ಕಾಶಿಬೆಟ್ಟು ಪ್ರಗತಿ ನಗರ, ಉಜಿರೆ ಇದರ ಆಶ್ರಯದಲ್ಲಿ “ಅಭ್ಯಾಸ್ ಕೆಸರ್ದಕಲ” ಎಂಬ ವಿಶೇಷ ಕಾರ್ಯಕ್ರಮ ಅರಳಿ ಅಲ್ಯೋಟ್ಟು ಶ್ರೀಮತಿ ಮತ್ತು ಶ್ರೀ ಸುಂದರ ಬಂಗೇರ ಇವರ ಗದ್ದೆಯಲ್ಲಿ ನಡೆಯಿತು. ಸುಮಾರು 400 ವಿದ್ಯಾರ್ಥಿಗಳು ಮತ್ತು ಮಿತ್ರ ಮಹಿಳಾ ಮಂಡಳಿ ಅರಳಿ ಹಾಗೂ ಮಿತ್ರ ಯುವಕ ಮಂಡಲ ಅರಳಿ ಇದರ ಅಧ್ಯಕ್ಷರು, ಸದಸ್ಯರುಗಳು ಭಾಗವಹಿಸಿದ್ದರು.

Sponsored

16 ವಿವಿಧ ಮನೋರಂಜನಾ ಆಟಗಳು ಹಾಗೂ ತುಳು ಜನಪದ ನೃತ್ಯಗಳನ್ನು ನಡೆಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಅಧ್ಯಕ್ಷರು ಕಾರ್ತಿಕೇಯ ಎಂಎಸ್, ಕಾರ್ಯದರ್ಶಿ ಶ್ರೀಮತಿ ಶಿಲ್ಪಾ, ಕಾಲೇಜಿನ ಪ್ರಾಂಶುಪಾಲರಾದ ಡಾ। ದೀಪಕ್ ಅಲ್ಯೋಟ್ಟು ಸುಂದರ ಬಂಗೇರ , ಅಶ್ವಿನಿ ಬಂಗೇರ ಹಾಗೂ ಸುರೇಶ ಸವಿತ ಬಂಗೇರ, ಮಿತ್ರ ಮಹಿಳಾ ಮಂಡಲ ಅಧ್ಯಕ್ಷರು ಶ್ರೀಮತಿ ಭಾಗೀರತಿ, ಮಿತ್ರ ಯುವಕ ಮಂಡಲ ಅಧ್ಯಕ್ಷರು ಅನಿಲ್, ಚಾರ್ಟರ್ಡ್ ಅಕೌಂಟೆಂಟ್ ಶ್ರೀಯುತ ಅನಂತ ಕೃಷ್ಣ ಪಡುವಟ್ನಾಯ ಮತ್ತು ಶ್ರೀಯುತ ಸಂತೋಷ್ ಕೋಟ್ಯಾನ್ ಮತ್ತು ಸುದೀಕ್ಷ ಸುದ್ದಿ ಉದಯ ವರದಿಗಾರರು ಉಪಸ್ಥಿತರಿದ್ದರು. ಗದ್ದೆಯ ಮಾಲೀಕರಾದ ಸುಂದರ ಬಂಗೇರ ಬೇಸಾಯದ ಮಹತ್ವ, ಸಂತುಷ್ಟ ಬದುಕಿನ ಕುರಿತಾಗಿ ಮಾತನಾಡಿದರು. ಸಿ ಎ ಅನಂತ ಕೃಷ್ಣ ಪಡುವಟ್ನಾಯ ವೃತ್ತಿಯೊಂದಿಗೆ ಪ್ರವೃತ್ತಿ ಅನಿವಾರ್ಯತೆಯನ್ನು ತಿಳಿಸಿದರು. ಕಾಲೇಜು ಶಿಕ್ಷಣದೊಂದಿಗೆ ವಾಸ್ತವ ಬದುಕನ್ನು ಕಟ್ಟುವ ಹಾಗೂ ಒಳ್ಳೆಯ ಮನಸ್ಸಿನ ಕಠಿಣ ಪರಿಶ್ರಮಿ ವಿದ್ಯಾರ್ಥಿಗಳನ್ನು ಕಾಣುವುದು ಅನಿವಾರ್ಯ ಎಂದು ಸಂಸ್ಥೆಯ ಆದರಣೀಯ ಅಧ್ಯಕ್ಷರು ಕಾರ್ತಿಕೇಯ ಎಂ.ಎಸ್ ಮಾತನಾಡಿದರು.

Marriage AdMarriage AdSponsored

ವಿದ್ಯಾರ್ಥಿಗಳ ಪೋಷಕರು ತುಳುನಾಡಿನ ತಿಂಡಿ ತಿನಿಸುಗಳನ್ನು. ಸ್ವ-ಇಚ್ಛೆಯಿಂದ ಮಾಡಿರುವಂತದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಮೆರುಗಿಗೆ ಪ್ರಾಂಶುಪಾಲರು, ಸಾಂಸ್ಕೃತಿಕ ಸಮಿತಿ ಸದಸ್ಯರುಗಳು, ಬೋಧಕ ಹಾಗೂ ಬೋಧಕೇತರರು, ಸ್ವಯಂಸೇವಕರು ಕಾರಣಿಭೂತರಾದರು. ಪರಿಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಕಾಲೇಜಿನ. ಉಪಪ್ರಾಂಶುಪಾಲರಾದ ಪ್ರೊಫೆಸರ್ ಚಂದ್ರಶೇಖರ್ ಗೌಡ ಕೆ ನೇರವೇರಿಸಿದರು.