ಭಾನುವಾರ, 25 ಅಕ್ಟೋಬರ್ 2026
Trending

ಶಿವಮೊಗ್ಗ: ಮತದಾರರ ಪಟ್ಟಿ ಸಮೀಕ್ಷೆ, ಬಿಎಲ್‌ಒ ಮೇಲೆ ಮುಗಿಬಿದ್ದ ನಾಯಿ!

Delhi News

ಶಿವಮೊಗ್ಗ ಜು.10: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಕರ್ತವ್ಯ ನಿರತ ಸರಕಾರಿ ಅಧಿಕಾರಿಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ಬಿಎಲ್‌ಓ ಲಕ್ಷ್ಮಿ ಸಿಂಗ್‌ ಅವರು ಶ್ವಾನದ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದಾರೆ.

Sponsored

ಲಕ್ಷ್ಮಿ ಸಿಂಗ್‌ ಅವರು ಆನಂದಪುರ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಒಂದು ಮನೆಯೊಂದರ ಬಳಿ ತೆರಳಿದಾಗ ಅಲ್ಲಿ ಸಾಕಿದ್ದ ನಾಯಿ ದಿಢೀರನೆ ಅವರ ಮೇಲೆ ಮುಗಿಬಿದ್ದಿದೆ. ನಾಯಿಯ ರೌದ್ರಾವತಾರಕ್ಕೆ ಬೆಚ್ಚಿಬಿದ್ದಿದ್ದಾರೆ ಅಧಿಕಾರಿ.

ಸಾಕು ನಾಯಿಯು ಲಕ್ಷ್ಮಿ ಸಿಂಗ್‌ ಅವರ ಕಾಲಿಗೆ ಬಲವಾಗಿ ಕಚ್ಚಿದ್ದು, ದಾಳಿಯಿಂದ ಅವರ ಕಾಲಿನ ಭಾಗದಲ್ಲಿ ಆಳವಾದ ಗಾಯವಾಗಿದೆ. ಇದರಿಂದ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿದೆ. ಕೂಡಲೇ ಜೊತೆಯಲಿದ್ದ ಸಹೋದ್ಯೋಗಿಗಳು, ಸ್ಥಳೀಯ ನಿವಾಸಿಗಳು ನಾಯಿಯನ್ನು ಓಡಿಸಿ, ಲಕ್ಷ್ಮಿ ಸಿಂಗ್‌ ಅವರನ್ನು ರಕ್ಷಣೆ ಮಾಡಿದ್ದಾರೆ.

ಗಾಯಗೊಂಡ ಲಕ್ಷ್ಮಿ ಸಿಂಗ್‌ ಅವರನ್ನು ಕೂಡಲೇ ಆನಂದಪುರದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.