Home » ಪುತ್ತೂರು: ಸುಲ್ತಾನ್‌ ಡೈಮಂಡ್ಸ್‌ ಆಂಡ್‌ ಗೋಲ್ಡ್‌ನಲ್ಲಿ ʼವಿಶ್ವ ವಜ್ರʼ ಪ್ರದರ್ಶನ

ಪುತ್ತೂರು: ಸುಲ್ತಾನ್‌ ಡೈಮಂಡ್ಸ್‌ ಆಂಡ್‌ ಗೋಲ್ಡ್‌ನಲ್ಲಿ ʼವಿಶ್ವ ವಜ್ರʼ ಪ್ರದರ್ಶನ

0 comments

ಪುತ್ತೂರು,ಸೆ.29: ದಕ್ಷಿಣ ಭಾರತದ ಪ್ರತಿಷ್ಠಿತ ಆಭರಣ ಮಳಿಗೆಯಾದ ಪುತ್ತೂರಿನ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋ ರೂಮ್‌ನಲ್ಲಿ ವಜ್ರಾಭರಣ ಪ್ರದರ್ಶನ ‘ವಿಶ್ವವಜ್ರ’ಕ್ಕೆ ಚಾಲನೆ ನೀಡಲಾಯಿತು.

ಡೇ ಕೇರ್ ಸ್ಪೆಷಾಲಿಟಿ ಕ್ಲಿನಿಕ್‌ನ ಡಾ. ಹಬೀನಾ ವಜ್ರಾಭರಣ ಪ್ರದರ್ಶನವನ್ನು ಉದ್ಘಾಟಿಸಿ ಶುಭಹಾರೈಸಿದರು. ಅತಿಥಿಗಳಾಗಿ ವಿಲ್ಮಾ ಪ್ರಿಯಾಂಕಾ ಡಿಸೋಜ, ಲಿಲ್ಲಿ ಎವೆಲಿನ್ ಡಿಸೋಜ, ಡ್ಯಾಶ್ ಮಾರ್ಕೆಟಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ನಳಿನಿ ಪಿ. ಶೆಟ್ಟಿ, ಫ್ಯಾಷನ್ ಡಿಸೈನರ್ ಶ್ರಾವ್ಯ ಜಗದೀಶ್ ಶೆಟ್ಟಿ, ಆರಳಪದವಿನ ಸೌಂದರ್ಯ ಹರ್ಬಲ್ ಬ್ಯೂಟಿ ಪಾರ್ಲ‌್ರನ ದೀಕ್ಷಾ ರೈ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ ಶಾಖಾ ವ್ಯವಸ್ಥಾಪಕ ರವಾಹತ್ ಕೆ. ಪಿ. ಉಪಸ್ಥಿತರಿದ್ದರು.

ವಧುವಿನ ವಿಶಿಷ್ಟ ವಜ್ರಾಭರಣಗಳು, ಸಾಂಪ್ರದಾಯಿಕ ಕ್ಲೋಸ್ ಸೆಟ್ಟಿಂಗ್ ವಜ್ರಾಭರಣಗಳು, ವೈವಿಧ್ಯಮಯ ತನ್ಮಣಿಯಾ ಕಲೆಕ್ಷನ್‌ಗಳು ಹಾಗೂ ಕೈಗೆಟುಕುವ ಬೆಲೆಯ ಹಗುರವಾದ ದೈನಂದಿನ ಬಳಕೆಯ ವಜ್ರಾಭರಣಗಳನ್ನು ಪ್ರದರ್ಶಿಸಲಾಗಿದೆ. ಗ್ರಾಹಕರು ವಜ್ರದ ಮೌಲ್ಯದ ಮೇಲೆ ಶೇ.20ರವರೆಗೆ ವಿಶೇಷ ರಿಯಾಯಿತಿ ಪಡೆಯಬಹುದು. ಅ.10ರವರೆಗೆ ಪ್ರದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

You may also like