ಕಳೆದ 15 ವರ್ಷಗಳಿಂದ ಸ್ವಂತ ಅಣ್ಣನಂತೆ ಭಾವಿಸಿ ರಾಖಿ ಕಟ್ಟುತ್ತಿದ್ದ 22 ವರ್ಷದ ಯುವಕನನ್ನೇ 20 ವರ್ಷದ ಯುವತಿ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿರುವ ಘಟನೆ ನಡೆದಿದೆ.


ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ನಂದಿನಿ ಪಾಂಡೆ ಎಂಬ ಯುವತಿ ತನ್ನದೇ ಗ್ರಾಮದ 22 ವರ್ಷದ ಶಾಶ್ವತ್ ಗುಪ್ತಾ ಎಂಬ ಯುವಕನನ್ನು ವಿವಾಹವಾಗಿದ್ದಾಳೆ. ಸೆಪ್ಟೆಂಬರ್ 20ರಂದು ಇಬ್ಬರೂ ತಮ್ಮ ಮನೆಗಳನ್ನು ತೊರೆದು ಬಳಿಕ ವಿವಾಹವಾಗಿದ್ದಾರೆ.
ಬಾಲ್ಯದಿಂದಲೇ ಮನೆಗೆ ಬಂದು ಹೋಗುತ್ತಿದ್ದ ‘ಶಾಶ್ವತ್’ ಎಂಬ ಯುವಕನನ್ನು ಆಕೆ ತನ್ನ ಸ್ವಂತ ಅಣ್ಣನಂತೆ ಭಾವಿಸಿ ರಾಖಿ ಕಟ್ಟುತ್ತಿದ್ದಳು ಎನ್ನಲಾಗಿದೆ. ಆದರೆ ಕಾಲ ಕಳೆದಂತೆ ಇಬ್ಬರ ನಡುವೆ ಪ್ರೀತಿ ಮೂಡಿದ್ದು, ಕಳೆದ ಸೆಪ್ಟೆಂಬರ್ 20ರಂದು ಇಬ್ಬರೂ ಮನೆ ಬಿಟ್ಟು ತೆರಳಿ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಮಗಳು ತಾನು ರಾಖಿ ಕಟ್ಟುತ್ತಿದ್ದ ವ್ಯಕ್ತಿಯನ್ನೇ ವಿವಾಹವಾಗಿದ್ದಾಳೆ ಎಂಬ ವಿಚಾರ ತಿಳಿದು ಪೋಷಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕೋಪಗೊಂಡ ಅವರು ಬದುಕಿರುವ ಮಗಳಿಗೇ ಅಂತ್ಯಕ್ರಿಯೆ ನೆರವೇರಿಸಿ, ಆಕೆಯ ಫೋಟೋಗೆ ‘ಸ್ವರ್ಗಸ್ಥರಾಗಿದ್ದಾರೆ’ ಎಂದು ಬರೆದು ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ, ನಂದಿನಿಯ ತಂದೆಗೆ ಸೆಪ್ಟೆಂಬರ್ 21ರಂದು ಮಗಳ ಮದುವೆಯ ವಿಚಾರ ತಿಳಿದುಬಂದಿದೆ. ಬಳಿಕ ಕುಟುಂಬಸ್ಥರು ನಂದಿನಿ ಮೃತಪಟ್ಟಿದ್ದಾಳೆ ಎಂಬಂತೆ ಸಾಂಕೇತಿಕ ಅಂತ್ಯಕ್ರಿಯೆ ವಿಧಿಗಳನ್ನು ನೆರವೇರಿಸಿದ್ದಾರೆ ಎಂದು ವರದಿಯಾಗಿದೆ.

