ಭಾನುವಾರ, 25 ಅಕ್ಟೋಬರ್ 2026
Trending

ಪುತ್ತೂರು: ಮರಗಳ ಕಟಾವು ಆರೋಪ, ಪ್ರಕರಣ ದಾಖಲು

ಪುತ್ತೂರು: ಮಂಜಲಡ್ಪು ಭಾಗದಲ್ಲಿ ವಿವಿಧ ಜಾತಿಯ ಮರಗಳನ್ನು ತುಂಡರಿಸಿದ ಮತ್ತು ಬನ್ನೂರಿನ ಸೇಡಿಯಾಪಿನಲ್ಲಿ ಪರವಾನಿಗೆ ಪಡೆದ ಜಾಗಕ್ಕಿಂತ ಅಧಿಕ ಪ್ರದೇಶದ ಮರ ಕಡಿದ ಕುರಿತು ಪುತ್ತೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

Sponsored

ಮಂಜಲ್ಪಡು ಭಾಗದಲ್ಲಿ ಡಿವೈಎಸ್ಪಿ ಕಚೇರಿ ಬಳಿ ಮರಗಳನ್ನು ಕಟಾವು ಮಾಡಲಾಗಿದೆ ಎಂಬ ಆರೋಪದಲ್ಲಿ ವಳತ್ತಡ್ಕ ನಿವಾಸಿ ಸಂದೀಪ್‌ ಆರ್‌ ಎಂಬುವವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿರುವ ವರದಿಯಾಗಿದೆ. ಅಕೇಶಿಯ ಹೈಬ್ರಿಡ್‌ ಮರದ ಸುಮಾರು 50ಕ್ಕೂ ಅಧಿಕ ಮರದ ದಿಮ್ಮಿಗಳನ್ನು ಹಾಗೂ ಮ್ಯಾಂಜಿಯಮ್‌, ಗಾಳಿ ಮರಗಳ ದಿಮ್ಮಿಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್‌ ಉಪಾಧೀಕ್ಷಕರ ಕಚೇರಿಗೆ ಅಪಾಯಕಾರಿಯಾಗಿದೆ ಎಂಬ ಅರ್ಜಿಯನ್ನಿಟ್ಟುಕೊಂಡು ಅಕ್ಕಪಕ್ಕದ ಜಮೀನಿನ ಮರಗಳನ್ನು ತೆಗೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಪರವಾನಿಗೆ ಪಡೆದ ಜಾಗಕ್ಕಿಂತ ಅಧಿಕ ಪ್ರದೇಶದ ಮರ ಕಡಿದ ಆರೋಪದಲ್ಲಿ ಸರಪಾಡಿ ಅಜಿಲಮೊಗರು ನಿವಾಸಿ ಫಾರೂಕ್‌ ಪಿ ಎಂಬುವವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಡಿಕಲ್‌ ಕಾಲೇಜು ಕಾಮಗಾರಿಗೆ ಹಲವು ಪ್ರದೇಶದಲ್ಲಿ ಮರ ಕಡಿಯಲು ಪರವಾನಿಗೆಯಾಗಿದ್ದು, ಇದರ ಹೊರತಾಗಿಯೂ ಕೆಲವು ಪ್ರದೇಶದ ಮರ ಕಡಿದ ಕುರಿತು ದಿಮ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ ಎಂದು ವರದಿಯಾಗಿದೆ.