ಶನಿವಾರ, 24 ಅಕ್ಟೋಬರ್ 2026

15 ವರ್ಷದಿಂದ ಸಾಕಿದ ಮಾಲೀಕ ನಿಧನ; ಅಂತ್ಯಸಂಸ್ಕಾರದ ವೇಳೆ ಮುದ್ದಿನ ನಾಯಿಯೂ ಸಾವು

ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ಸಾಕು ನಾಯಿಯೊಂದು ತನ್ನ ಮಾಲೀಕನ ಸಾವಿನ ಆಘಾತವನ್ನು ಸಹಿಸಲಾಗದೆ, ಅಂತ್ಯಕ್ರಿಯೆ ಮೆರವಣಿಗೆಯ ಸಮಯದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆತುಲ್‌ ನಗರದ ಸಿವಿಲ್‌ ಲೈನ್ಸ್‌ ನಿವಾಸಿ 67 ವರ್ಷದ ಪ್ರದೀಪ್‌ ಜೈನ್‌, ಭೋಪಾಲ್‌ನ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನ ಹೊಂದಿದ್ದಾರೆ. ಅವರ ಮೃತದೇಹವನ್ನು ಕಳೆದ ಭಾನುವಾರ ಸಂಜೆ ಬೆತುಲ್‌ಗೆ ತರಲಾಯಿತು. ಅಂತ್ಯಕ್ರಿಯೆ ಸಿದ್ಧತೆಗಳು ನಡೆಯುತ್ತಿದ್ದವು. ಅವರ ಮುದ್ದಿನ ನಾಯಿ 15 ವರ್ಷಗಳ ಜೊತೆಗಾ ದುಗ್ಗು ಎನ್ನುವ ನಾಯಿ ತನ್ನ ಮಾಲೀಕನ ಸಾವಿನಿಂದ ದುಃಖಗೊಂಡಿತ್ತು.

ದಗ್ಗು ಪದೇ ಪದೇ ಮಾಲೀಕನ ದೇಹದ ಬಳಿಗೆ ಹೋಗಿ ಅವನನ್ನು ಎಬ್ಬಿಸಲು ಪ್ರಯತ್ನ ಮಾಡುತ್ತಿತ್ತು. ಆಗ ಕುಟುಂಬದವರು ನಾಯಿಯನ್ನು ಮತ್ತೊಂದು ಕೋಣೆಯಲ್ಲಿ ಇರಿಸಿದರು. ಆದರೆ ದುಗ್ಗು ಅಳುತ್ತಾ ಹೊರಗೆ ಬರಲು ಪ್ರಯತ್ನ ಪಡುತ್ತಲೇ ಇತ್ತು. ಪ್ರದೀಪ್‌ ಜೈನ್‌ ಅವರ ಅಂತ್ಯಕ್ರಿಯೆ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ದುಗ್ಗು ಶವ ಯಾತ್ರೆಯನ್ನು ಹಿಂಬಾಲಿಸಿದ್ದಾನೆ. ಸ್ವಲ್ಪ ದೂರ ನಡೆದ ದುಗ್ಗು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ.

ತನ್ನ ಮಾಲೀಕನ ಜೊತೆಯೇ ಉಸಿರು ನಿಲ್ಲಿಸಿದ್ದಾನೆ. ಇದನ್ನು ನೋಡಿದ ಅಲ್ಲಿದ್ದವರೆಲ್ಲ ಭಾವುಕರಾಗಿದ್ದಾರೆ.

ಪ್ರದೀಪ್‌ ಜೈನ್‌ ಅವರ ಅಂತ್ಯಕ್ರಿಯೆ ಮಾಡಿದ ನಂತರ ದುಗ್ಗುವಿಗೂ ಗೌರವಯುತ ಬೀಳ್ಕೊಡುಗೆ ನೀಡಲಾಯಿತು. ಪ್ರದೀಪ್‌ ಜೈನ್‌ ಸಮೀಪದಲ್ಲಿಯೇ ದುಗ್ಗುವಿಗೆ ಪೂರ್ಣ ಗೌರವಗಳೊಂದಿಗೆ ಸಮಾಧಿ ಮಾಡಿದರು.