ಮಂಗಳವಾರ, 27 ಅಕ್ಟೋಬರ್ 2026
Trending

ಒಲೆಯ ಮೇಲೆ ಮಗುವಿನ ಕಾಲಿಟ್ಟು ಸುಟ್ಟ ಪಾಪಿ ತಾಯಿ!

ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅದೆಂತಹ ನೀಚ ಕೃತ್ಯಕ್ಕೆ ಇಳಿಯುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಂತಿದೆ. ಹೆತ್ತ ಮಗುವನ್ನೇ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ತಾಯಿಯೊಬ್ಬಳು ಕ್ರೂರವಾಗಿ ಹಿಂಸಿಸಿದ ಅಮಾನವೀಯ ಘಟನೆ ನಡೆದಿದೆ.

Sponsored

ಪಾಲಕ್ಕಾಡ್ ನ ಅಟ್ಟಪ್ಪಾಡಿ ಎಂಬಲ್ಲಿನ ನಾಲ್ಕು ವರ್ಷದ ಬುಡಕಟ್ಟು ಬಾಲಕನನ್ನು ಅವನ ತಾಯಿ ಮತ್ತು ತಾಯಿಯ ಸ್ನೇಹಿತ ಕ್ರೂರವಾಗಿ ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ಒಲೆಯ ಮೇಲೆಯೇ ಮಗುವಿನ ಕಾಲು ಇಟ್ಟು ಸುಟ್ಟಿದ್ದಾರೆ.

Advertisement
Advertisement

ಬಾಲಕನ ತಂದೆಯ ದೂರಿನ ಮೇರೆಗೆ, ತಾಯಿ ರಂಜಿನಿ ಮತ್ತು ಆಕೆಯ ಸ್ನೇಹಿತ ಉನ್ನಿಕೃಷ್ಣನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಒಲೆಯ ಮೇಲೆ ಕಾಲು ಇಟ್ಟಿದ್ದರಿಂದ ಮಗುವಿನ ಕಾಲು ಸುಟ್ಟು ಹೋಗಿದ್ದು, ಕೊಟ್ಟತ್ತಾರ ಬುಡಕಟ್ಟು ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ತಿಳಿದು ಬಂದಿದೆ.

Advertisement