ಶನಿವಾರ, 24 ಅಕ್ಟೋಬರ್ 2026

ಮಾಣಿಲ ಶ್ರೀ ವರಮಹಾಲಕ್ಷ್ಮೀ ವೃತಾಚಾರಣೆ ಮಂಜೇಶ್ವರ ವಲಯ ಸಮಿತಿ

ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ ಮಾಣಿಲ ಶ್ರೀ ವರಮಹಾಲಕ್ಷ್ಮೀ ವೃತಾಚಾರಣೆ ಮಂಜೇಶ್ವರ ವಲಯ ಸಮಿತಿ (ಮಂಜೇಶ್ವರ,ಮೀಂಜ ಮಂಗಲ್ಪಾಡಿ,ವರ್ಕಾಡಿ ಕುಲಾಲ ಪಂಚಾಯತ್ ಶಾಖೆ) ನೇತೃತ್ವದಲ್ಲಿ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರ ಮಾರ್ಗದರ್ಶನದಲ್ಲಿ ಜರಗುತ್ತಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದ ಯಶಸ್ವಿಗಾಗಿ ಹಸಿರುವಾಣಿ ಹೊರೆ ಕಾಣಿಕೆ /ಧನಸಹಾಯ ಸಮರ್ಪಣೆಯು ಇಂದು ತಾರೀಕು 09/08/2026 ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಚೇರಿಯಿಂದ ಹೊರಟು ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀ ಕ್ಷೇತ್ರ ಶ್ರೀಧಾಮ ಮಾಣಿಲಕ್ಕೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು, ಪದಾಧಿಕಾರಿಗಳಾದ ಶ್ರೀ ಸುಧೀರ್ ರಂಜನ್ ದೈಗೋಳಿ, ಶ್ರೀ ತಾರಾನಾಥ ಕಣ್ವತೀರ್ಥ, ಶ್ರೀ ಉದಯ ಕುಮಾರ್ ಸಿ ಕಣ್ವತೀರ್ಥ, ಶ್ರೀ ಸುರೇಶ್ ಕಣ್ವತೀರ್ಥ, ಶ್ರೀ ಕೃಷ್ಣಪ್ಪ ಉಜಿರ ಉಪಸ್ಥಿತರಿದ್ದರು. ಭಕ್ತಿಪೂರ್ವಕ ಧನ ಸಹಾಯ ಹಾಗೂ ಹಸಿರುವಾಣಿ ಹೊರೆ ಕಾಣಿಕೆ ಸಾಮಗ್ರಿಗಳನ್ನು ನೀಡಿ ಯಶಸ್ವಿಗೊಳಿಸಿದ ಸರ್ವರಿಗೂ ಸಮಿತಿಯು ವಂದನೆಗಳನ್ನು ಸಲ್ಲಿಸುತ್ತದೆ.ಶ್ರೀ ದೇವರು ಸರ್ವರನ್ನು ಹರಸಲಿ ಎಂದು ಪ್ರಾರ್ಥಿಸುತ್ತೇವೆ.