ಶನಿವಾರ, 24 ಅಕ್ಟೋಬರ್ 2026

ಆ. 16ರೊಳಗೆ LPG ಕೆವೈಸಿ ಕಡ್ಡಾಯ!!

ಭಾರತದ ತೈಲ ಮಾರುಕಟ್ಟೆ ಕಂಪೆನಿಗಳು ತಮ್ಮ ಗ್ರಾಹಕರಿಗೆ ಆಗಸ್ಟ್ 16ರರೊಳಗೆ ಇಕೆವೈಸಿ ಪೂರ್ಣಗೊಳಿಸುವಂತೆ ಸೂಚನೆಯನ್ನು ನೀಡಿದೆ. ಕೇಂದ್ರ ಸರ್ಕಾರದಿಂದ ಸಿಗುವ ಸಬ್ಸಿಡಿ ಪಡೆಯಲು ಇದನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇಂಡೇನ್, ಭಾರತ್ ಗ್ಯಾಸ್ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ, ಈಗಾಗಲೇ ತಮ್ಮತಮ್ಮ ಗ್ರಾಹಕರಿಗೆ ಮಾಹಿತಿಯನ್ನು ನೀಡಿದ್ದು, ಯುಗಾದಿಗ ದಿನಾಂಕದೊಳಗೆ ಇಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಂಪರ್ಕವನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದೆ. ಹಾಗಿದ್ದರೆ ಇ-ಕೆವೈಸಿ ಯನ್ನು ಎಲ್ಲಿ ಮಾಡಿಸುವುದು? ಹೇಗೆ ಮಾಡುವುದು? ಇಲ್ಲಿದೆ ನೋಡಿ ಡೀಟೇಲ್ಸ್ 

ಆಗಸ್ಟ್ 16ರ ಒಳಗೆ E-KYC ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗುತ್ತಿದೆ. ಗೃಹ ಬಳಕೆಯ LPG ಸಂಪರ್ಕ ಹೊಂದಿರುವ ಪ್ರತಿಯೊಬ್ಬ ಗ್ರಾಹಕರೂ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ತೈಲ ಕಂಪನಿಗಳು ಹಾಗೂ ಗ್ಯಾಸ್ ವಿತರಕರು ಮನವಿ ಮಾಡುತ್ತಿದ್ದಾರೆ. ಗ್ರಾಹಕರ ಮಾಹಿತಿಯನ್ನು ಪರಿಶೀಲಿಸುವುದು, ದಾಖಲೆಗಳನ್ನು ಅಪ್‌ಡೇಟ್ ಮಾಡುವುದು ಹಾಗೂ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ E-KYC ಪ್ರಕ್ರಿಯೆ ನಡೆಸಲಾಗುತ್ತಿದೆ. ಈಗಾಗಲೇ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಡೆಡ್‌ಲೈನ್ ನೀಡಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಇದೀಗ ಆಗಸ್ಟ್ 16ರವರೆಗೆ ಗಡುವನ್ನು ವಿಸ್ತರಿಸಿದೆ.

ಕೆವೈಸಿ ಮಾಡುವುದು ಹೇಗೆ? ಇಂಡೇನ್ ಕಂಪನಿ ಡೀಟೇಲ್ಸ್ ಇಲ್ಲಿದೆ

ಇಂಡೇನ್ ಗ್ಯಾಸ್ (Indane) – ಆಧಾರ್ ಆಧಾರಿತ ಫೇಸ್ ಬಯೋಮೆಟ್ರಿಕ್ ಇ-ಕೆವೈಸಿಯನ್ನು ಮನೆಯಲ್ಲಿಯೇ ಕುಳಿತು ಮಾಡಬಹುದು. 

ಇಂಡೇನ್ ಆಪ್, ’IndianOil One’ ಅಥವಾ ’AadhaarFaceRD’ ಡೌನ್’ಲೋಡ್ ಮಾಡಿಕೊಳ್ಳಿ.

ಆಪ್ ಡೌನ್ಲೋಡ್ ಆದ ನಂತರ, ’’IndianOil One’ ಆಪ್ ಓಪನ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬಳಸಿ ಸೈನ್ ಆಪ್ (Sign Up) ಆಗಿ.

ಕ್ಯಾಶ್ ಮೆಮೊ ಅಥವಾ ಸಬ್ಸ್ಕ್ರಿಪ್ಷನ್ ವೋಚರ್’ನಲ್ಲಿರುವ ಹದಿನಾರು ಅಂಕಿಯ ‘LPG ID’ ಯನ್ನು ಲಿಂಕ್ ಮಾಡಿ. ಆಗ, ಗ್ರಾಹಕರ ವರದಿಗಳು ಕಾಣಿಸುತ್ತವೆ.

ನಂತರ, ಹೋಂ ಸ್ಕ್ರೀನ್’ಗೆ ಹೋಗಿ, ’My Profile’ ಮೇಲೆ ಕ್ಲಿಕ್ ಮಾಡಿ.

ಅಲ್ಲಿರುವ ಎಲ್‌ಪಿಜಿ ವಿವರಗಳನ್ನೊಮ್ಮೆ ಪರಿಶೀಲಿಸಿ, ನಂತರ ’re-KYC’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಸ್ಕೀನ್ ಮೇಲೆ ಕಾಣಿಸುವ ನಿಯಮಗಳು ಮತ್ತು ಷರತ್ತುಗಳನ್ನುಓದಿ, ಒಪ್ಪಿಗೆಯನ್ನು ನೀಡಿ.

ಫೇಸ್ ಅಥೆಂಟಿಕೇಶನ್ ಪುಟದಲ್ಲಿರುವ ಚೆಕ್’ಬಾಕ್ಸ್ ಕ್ಲಿಕ್ ಮಾಡಿ.

’Face Scan’ ಬಟನ್ ಕ್ಲಿಕ್ ಮಾಡಿದರೆ, ಆಧಾರ್ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಆಗಿದೆ ಎಂದು ತಿಳಿಯುವುದು ಹೇಗೆ?

ಆನ್‌ಲೈನ್‌ನಲ್ಲಿ ಪರಿಶೀಲಿಸುವ ಮತ್ತು ಮಾಡುವ ವಿಧಾನ

ಮೊಬೈಲ್ ಆಪ್ ಡೌನ್‌ಲೋಡ್ ಮಾಡಿ: ನಿಮ್ಮ ಗ್ಯಾಸ್ ಒದಗಿಸುವ ಕಂಪನಿಯ ಆಪ್ ತೆರೆಯಿರಿ (ಉದಾ: ಇಂಡೇನ್, ಹೆಚ್‌ಪಿ ಅಥವಾ ಭಾರತ್ ಗ್ಯಾಸ್).

ಲಾಗಿನ್ ಅಥವಾ ರಜಿಸ್ಟರ್ ಮಾಡಿ: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿ ಖಾತೆಗೆ ಪ್ರವೇಶಿಸಿ.

e-KYC ಆಪ್ಷನ್ ಬಳಸಿ: ಪ್ರೊಫೈಲ್ ಅಥವಾ ‘Aadhaar e-KYC’ ವಿಭಾಗಕ್ಕೆ ಹೋಗಿ ನಿಮ್ಮ ಪ್ರಸ್ತುತ ಸ್ಥಿತಿ ಪರಿಶೀಲಿಸಿ.

ಮುಖದ ಗುರುತು/OTP ಪರಿಶೀಲನೆ: ಆಧಾರ್‌ಗೆ ಲಿಂಕ್ ಮಾಡಿದ ನಂಬರ್‌ಗೆ ಬರುವ OTP ಅಥವಾ ಆಧಾರ್ ಫೇಸ್ RD ಆಪ್ ಬಳಸಿ ಸ್ಟೇಟಸ್ ಅಪ್‌ಡೇಟ್ ಅಥವಾ ಚೆಕ್ ಮಾಡಿ