ಸೋಮವಾರ, 26 ಅಕ್ಟೋಬರ್ 2026
Trending

ಮಂಗಳೂರು: ಬಾಲಮಂದಿರದಿಂದ ಬಾಲಕ ಪರಾರಿ

ಮಂಗಳೂರು: ನಗರದ ಬೋಂದೆಲ್‌ನ ಬಾಲಮಂದಿರದಿಂದ ಬಾಲಕ ನಾಪತ್ತೆಯಾಗಿರುವ ಕುರಿತು ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sponsored

ದಾಸ್‌ ಮೆಹತಾ (14) ನಾಪತ್ತೆಯಾಗಿರುವ ಬಾಲಕ. ಈತನಿಗೆ ಮಾತು ಬರುವುದಿಲ್ಲ, ಕಿವಿ ಕೇಳುವುದಿಲ್ಲ. ಅ.18 ರಂದು ಬಾಲಮಂದಿರದಿಂದ ತಪ್ಪಿಸಿಕೊಂಡು ಹೋಗಿದ್ದು, ಮಂದಿರದ ಗಾರ್ಡ್‌ ಕೆಲಸದಲ್ಲಿದ್ದ ಕೇಶವ ದೂರನ್ನು ನೀಡಿದ್ದಾರೆ.

Advertisement

ದುಂಡು ಮುಖ, ದಪ್ಪ ಮೈಕಟ್ಟು, ಗೋಧಿ ಮೈ ಬಣ್ಣ ಹೊಂದಿದ್ದಾನೆ. ಈತನ ಪತ್ತೆಯಾದಲ್ಲಿ ಕಾವೂರು ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.