ಮಲಯಾಳಂ ಸಿನಿಮಾ ನಿರ್ದೇಶಕ ವಿವಾಹವಾದ ಒಂದೂವರೆ ತಿಂಗಳಿಗೆ ನಿಧನ
ಮಲಯಾಳಂ ಸಿನಿಮಾ ರಂಗದ ನಿರ್ದೇಶಕ ಬೆಲ್‌ರಾಜ್ ಕಳರಿಕಲ್ (28) ಅವರು ಕೊಚ್ಚಿಯ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅ.17 (ಶನಿವಾರ) ಈ ಘಟನೆ ನಡೆದಿದೆ. ಇವರ ನಿರ್ದೇಶನದ ಮೊದಲ ವೆಬ್‌ಸಿರೀಸ್ ʼಕಾಪಿ ಸ್ಕ್ಯಾಡ್ʼ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆರಂಭಿಸಿದ ಕೆಲವೇ ದಿನದಲ್ಲಿ ಈ ದುರ್ಘಟನೆ ನಡೆದಿದೆ.
Sponsoredನಿಳಲ್, ಮಧುರಂಗ, ಡಾಕಿನಿ ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಬೆಲ್‌ರಾಜ್ ಕಳರಿಕಲ್ ಅವರ ಸಾವಿಗೆ ನಿಖರವಾದ ಕಾರಣ ಏನು ಎನ್ನುವುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಆದರೂ ಆರಂಭಿಕ ತನಿಖೆ ಹಾಗೂ ವರದಿಯ ಅನುಸಾರ ಹೃದಯಾಘಾತದಿಂದ ನಿಧನರಾಗಿರಬಹುದು ಎಂದು ಶಂಕಿಸಲಾಗಿದೆ.
ಬೆಲ್‌ರಾಜ್ ಕಳರಿಕಲ್ ಅವರು ಆರು ವರ್ಷಗಳ ಪ್ರೀತಿಯಲ್ಲಿದ್ದು, ಸೆಪ್ಟೆಂಬರ್ 11 ರಂದು ಆಥಿರಾ ಬಿಂದು ಸಾಬು ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾಗಿ ಕೇವಲ ಒಂದೂವರೆ ತಿಂಗಳು ಕಳೆಯುವುದರೊಳಗೆ ಈ ದುರಂತ ನಡೆದಿದೆ.




