ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ₹9.50 ರಷ್ಟು ಹೆಚ್ಚಿಸಿವೆ. ಆದರೆ, 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
Sponsoredಇಂಡಿಯನ್ ಆಯಿಲ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ವಾಣಿಜ್ಯ ಸಿಲಿಂಡರ್ ಬೆಲೆ ₹9.50 ರಷ್ಟು ಏರಿಕೆಯಾಗಿದ್ದು, ₹2,738.00 ರಿಂದ ₹2,747.50 ಕ್ಕೆ ತಲುಪಿದೆ. 5 ಕಿಲೋಗ್ರಾಂ ತೂಕದ ಗೃಹಬಳಕೆಯೇತರ ಸಿಲಿಂಡರ್ ದರವನ್ನು ₹2 ಹೆಚ್ಚಿಸಲಾಗಿದ್ದು, ಈಗ ಇದರ ಬೆಲೆ ₹762 ರಿಂದ ₹764 ಕ್ಕೆ ಏರಿದೆ. 14.2 ಕೆಜಿ ಗೃಹಬಳಕೆ ಸಿಲಿಂಡರ್ ಹಳೆಯ ದರದಲ್ಲಿ ಅಂದರೆ ₹951 ಕ್ಕೆ ಲಭ್ಯವಿದೆ.




