ಸೋಮವಾರ, 26 ಅಕ್ಟೋಬರ್ 2026
Trending

ದರ್ಬೆ ಪ್ರಕರಣ: ಅಂಗಡಿ ಮಾಲಕಿ ಅಂಜನಾ ಪೈ, ಸುದರ್ಶನ್‌ ಪೈಗೆ ಜಾಮೀನು ಮಂಜೂರು

ಪುತ್ತೂರು: ದೆರ್ಬೆಯ ಜನಸೇವಾ ಕೇಂದ್ರದಲ್ಲಿ ದಾಖಲಾತಿಯೊಂದಕ್ಕೆ ತಾಂತ್ರಿಕ ದೋಷದಿಂದ ಉಂಟಾದ ವಿಚಾರಕ್ಕೆ ಕುರಿತಂತೆ ಕೊಲೆಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸುದರ್ಶನ್‌ ಪೈಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Sponsored

ಇನ್ನೋರ್ವ ಆರೋಪಿಯಾಗಿರುವ ಅಂಗಡಿ ಮಾಲಕಿ ಅಂಜನಾ ಎಸ್‌ ಪೈ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಅಂಗಡಿ ಮಾಲಕಿ ಅಂಜನಾ ಎಸ್‌ ಪೈ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.