ಪೊಲೀಸ್ ಠಾಣೆಯೊಂದರಲ್ಲಿ, ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಸಹೋದ್ಯೋಗಿಯೊಂದಿಗೆ ಪ್ರಣಯದಾಟ ಆಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಸುಮ್ಮನೆ ಕುಳಿತ ಪೊಲೀಸ್ ಅರವಿಂದ್ ಅಮಾನತ್ತಾಗಿದ್ದಾರೆ.
Sponsoredಹೌದು, ಉತ್ತರ ಪ್ರದೇಶದ ಪೊಲೀಸ್ ಠಾಣೆ ಒಂದರಲ್ಲಿ ಠಾಣೆಯೊಳಗೆ ಯಾರೂ ಇಲ್ಲದ ವೇಳೆ ಲೇಡಿ ಪೋಲಿಸ್ ಒಬ್ಬಳು ಪೋಲಿಸಪ್ಪನ ಜೊತೆ ಪ್ರಣಯದಾಟ ಶುರು ಮಾಡಿದ್ದಾಳೆ. ಪ್ರೀತಿಸುವವರ ಕಣ್ಣು ಕುರುಡು ಎಂಬಂತೆ ಪ್ರಣಯದಲ್ಲಿದ್ದ ಈ ಜೋಡಿಗಳಿಗೆ ಸ್ಟೇಷನ್ ಒಳಗಡೆ ಇರುವ ಸಿಸಿಟಿವಿಯೂ ಕಣ್ಣಿಗೆ ಕಂಡಿಲ್ಲ. ಸಿಸಿಟಿವಿ ಮುಂದೆಯೇ ಪ್ರಣದಾಯಟ ಶುರು ಮಾಡಿದ್ದು ಅದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ವೈರಲ್ ಆಗಿರುವ ಸಿಸಿಟಿವಿ ವಿಡಿಯೋದಲ್ಲಿ ಠಾಣೆಯೊಳಗೆ ಮಹಿಳಾ ಕಾನ್‌ಸ್ಟೆಬಲ್ ತನ್ನ ಸಹೋದ್ಯೋಗಿಯ ಬಳಿಗೆ ಬಂದು, ಕಂಪ್ಯೂಟರ್ ಮುಂದೆ ಕುರ್ಚಿಯ ಮೇಲೆ ಕುಳಿತಿದ್ದಾಗ ಆತನನ್ನು ಹಿಂದಿನಿಂದ ತಬ್ಬಿಕೊಳ್ಳೋದನ್ನ ತೋರಿಸಲಾಗಿದೆ. ಆಕೆ ಅಷ್ಟಕ್ಕೆ ಸುಮ್ಮನಾಗಿಲ್ಲ. ಪೊಲೀಸಪ್ಪನಿಗೆ ಮತ್ತಿನಲ್ಲಿ ಮುತ್ತಿಡಲು ಕೆಳಗೆ ಬಾಗಿ ನಿಂತಿರುವುದು ಕಂಡುಬಂದಿದೆ. ಈ ವೇಳೆ ಪೊಲೀಸಪ್ಪ ಸೈಲೆಂಟಾಗಿ ಕುಳಿತಿರುವ ಪೊಲೀಸಪ್ಪನನ್ನು ಅರವಿಂದ್ ಎಂದು ಗುರುತಿಸಲಾಗಿದೆ. ಲೇಡಿ ಪೊಲೀಸ್ ಅವನನ್ನು ತಬ್ಬಿಕೊಳ್ಳಲು ಪದೇಪದೆ ಯತ್ನಿಸಿರುವುದು ಕಂಡುಬಂದಿದೆ. ಇದ್ಯಾವುದು ಗಮನಿಸದೆ ಪೊಲೀಸಪ್ಪ ತನ್ನ ಕೆಲಸದಲ್ಲಿ ತೊಡಗಿರುವುದು, ಕುರ್ಚಿಯಿಂದ ಎದ್ದು ಕೋಣೆಯೊಳಗೆ ಹೋಗಿದ್ದಾನೆ. ಈ ವೇಳೆ ಅವನನ್ನು ಲೇಡಿ ಪೊಲೀಸ್ ಹಿಂಬಾಲಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆ ಕುರಿತು ಜಾಲೌನ್ ಪೊಲೀಸರು ಗಮನ ಹರಿಸಿ, ಕಾನ್ಸ್‌ಟೇಬಲ್ ಅರವಿಂದ್‌ನನ್ನು ಅಮಾನತುಗೊಳಿಸಿದ್ದು, ಸಂಪೂರ್ಣ ಪ್ರಕರಣದ ತನಿಖೆಯನ್ನು ನಗರ ಉಪವಿಭಾಗಾಧಿಕಾರಿಗೆ ವಹಿಸಿದ್ದಾರೆ. ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಪುರುಷ ಕಾನ್ಸ್‌ಟೇಬಲ್ ವಿರುದ್ಧ ಮಾತ್ರ ಕ್ರಮ ಕೈಗೊಂಡಿರುವುದಕ್ಕೆ ಪ್ರಶ್ನೆಗಳು ಎದ್ದಿವೆ. ಮಹಿಳಾ ಕಾನ್ಸ್‌ಟೇಬಲ್ ವಿರುದ್ಧವೂ ಸಮಾನ ಕ್ರಮ ಕೈಗೊಳ್ಳಬೇಕಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಲಿಂಗ ತಾರತಮ್ಯದ ಕುರಿತು ಚರ್ಚೆ ಆರಂಭವಾಗಿದೆ.




