ರಾಜಕೀಯ ವಿದ್ಯಮಾನಗಳು ಪ್ರಕೃತಿಯ ವಿಕೋಪಗಳ ಬಗ್ಗೆ ಆಗಾಗ ಅಚ್ಚರಿಯ ಭವಿಷ್ಯವನ್ನು ನುಡಿಯುವ ಕೋಡಿಮಠದ ಶ್ರೀಗಳು ಇದೀಗ ಈ ವರ್ಷ ಮಳೆಯ ಅಭಾವದ ಬಗ್ಗೆ ಶಾಕಿಂಗ್ ಭವಿಷ್ಯವನ್ನು ನುಡಿದಿದ್ದಾರೆ.
Sponsoredಈ ವರ್ಷ ಮಳೆ ಅಬಾವ ತೀವ್ರವಾಗಿ ಕಾಡಲಿದೆ ಎಂದು ಅವಮಾನ ಇಲಾಖೆ ವರದಿ ನೀಡಿದೆ. ಇದರಿಂದ ರೈತರೆಲ್ಲರೂ ಕಂಗಾಲಾಗಿದ್ದಾರೆ. ಈ ನಡುವೆಯೇ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಮಳೆಯ ಕುರಿತು ಭವಿಷ್ಯ ನುಡಿದಿರುವುದು ಇನ್ನೂ ಆತಂಕ ಹೆಚ್ಚಿಸುತ್ತದೆ. ಯಾಕೆಂದರೆ ಶ್ರೀಗಳು ಆಗಾಗ ನುಡಿಯುವ ಭವಿಷ್ಯ ಹೆಚ್ಚಿನ ನಿಜವಾಗುತ್ತಿವೆ. ಹೀಗಾಗಿ ಈ ಮಳೆಯ ಭವಿಷ್ಯ ಕೂಡ ನಿಜವಿರಬಹುದು ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಜೂನ್ ಆರಂಭದಲ್ಲೇ ಅಬ್ಬರಿಸಬೇಕಿದ್ದ ಮುಂಗಾರು ಮಳೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಈ ವರ್ಷ ಮಳೆ-ಬೆಳೆ ಕಡಿಮೆಯಾಗಲಿದ್ದು, ಅನ್ನ ಮತ್ತು ನೀರಿಗಾಗಿ ಹಾಹಾಕಾರ ಉಂಟಾಗಲಿದೆ ಎಂದು ಕೋಡಿಶ್ರೀಗಳು ಒಂದು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಜೂನ್ ತಿಂಗಳು ಮುಗಿಯುತ್ತಾ ಬಂದರೂ ರಾಜ್ಯದ ಹಲವೆಡೆ ಬರದ ಛಾಯೆ ಆವರಿಸುತ್ತಿರುವುದು ಶ್ರೀಗಳ ಮುನ್ಸೂಚನೆಯನ್ನು ನೆನಪಿಸುತ್ತಿದೆ.
ಇದರೊಂದಿಗೆ, ದೇಶದಾದ್ಯಂತ ಅಪಮೃತ್ಯುಗಳು ಹಾಗೂ ಅಗ್ನಿ ದುರಂತಗಳು ಹೆಚ್ಚಾಗಲಿವೆ ಎಂದು ಶ್ರೀಗಳು ಹೇಳಿದ್ದರು. ಅದಕ್ಕೆ ಪೂರಕವೆಂಬಂತೆ ಉತ್ತರ ಪ್ರದೇಶದ ಲಖನೌ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭೀಕರ ಬೆಂಕಿ ಅವಘಡಗಳು ಸಂಭವಿಸಿ ಸಾವುನೋವುಗಳು ವರದಿಯಾಗುತ್ತಿವೆ. ಮತ್ತೊಂದೆಡೆ, ‘ಭೂತಾಯಿ ಬಾಯಿಬಿಡಲಿದ್ದಾಳೆ’ ಎಂದು ಶ್ರೀಗಳು ಎಚ್ಚರಿಸಿದ ಬೆನ್ನಲ್ಲೇ ವೆನೆಜುವೆಲಾದಲ್ಲಿ ಸರಣಿ ಭೂಕಂಪಗಳು ಸಂಭವಿಸಿ ನೂರಾರು ಜನರು ಬಲಿಯಾಗಿದ್ದಾರೆ. ಜಪಾನ್ ದೇಶದಲ್ಲೂ ನಿರಂತರವಾಗಿ ಭೂಮಿ ಕಂಪಿಸುತ್ತಿದ್ದು, ಮನುಷ್ಯನಿಗೆ ಮುಂದಿನ ದಿನಗಳು ಸುಲಭವಿಲ್ಲ ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಸಾಬೀತಾಗುತ್ತಿವೆ.




