ಶನಿವಾರ, 24 ಅಕ್ಟೋಬರ್ 2026

ಇನ್ಫೋಸಿಸ್‌ಗೆ ಹೊಸ ಸಿಇಒ ಆಗಿ ಆಶಿಶ್‌ ಕುಮಾರ್‌ ದಾಶ್‌ ನೇಮಕ

ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾದ ಇನ್ಫೋಸಿಸ್, ಏಪ್ರಿಲ್ 1, 2027 ರಿಂದ ಜಾರಿಗೆ ಬರುವಂತೆ ಆಶಿಶ್ ಕುಮಾರ್  ದಾಶ್‌ ಅವರನ್ನು ತನ್ನ ನಿಯೋಜಿತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಓ) ನೇಮಕ ಮಾಡಿರುವುದಾಗಿ ಗುರುವಾರ ಘೋಷಿಸಿದೆ. ಇದರೊಂದಿಗೆ ಕಂಪನಿಯು ಯೋಜಿತ ನಾಯಕತ್ವ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.

ಸಲೀಲ್ ಪಾರೇಖ್ ಅವರ ಎರಡನೇ ಅವಧಿ ಪೂರ್ಣಗೊಂಡ ನಂತರ, 2027ರ ಏಪ್ರಿಲ್ 1ರಂದು ದಾಶ್‌ ಅವರು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ (CEO) ಹುದ್ದೆಗಳನ್ನು ವಹಿಸಿಕೊಳ್ಳಲಿದ್ದಾರೆ. ಈ ಬದಲಾವಣೆ ನಡೆಯುವ ವೇಳೆಗೆ ಪಾರೇಖ್ ಅವರು ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಕಂಪನಿಯನ್ನು ಮುನ್ನಡೆಸಿರುತ್ತಾರೆ.

ಇನ್ಫೋಸಿಸ್ ಮಂಡಳಿಯ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಮೇರೆಗೆ ದಾಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ಷೇರುದಾರರ ಅನುಮೋದನೆಗೆ ಒಳಪಟ್ಟು, ಅವರನ್ನು ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.