ಮಂಗಳವಾರ, 3 ನವೆಂಬರ್ 2026

ಔಷಧಿ ಪ್ಯಾಕೆಟ್‌ಗಳ ಮೇಲಿನ ಕೆಂಪು ಪಟ್ಟಿ ಯಾಕೆ ಇರುತ್ತದೆ ಗೊತ್ತಾ?

Advertisement
Advertisement

ನಾವು ಮೆಡಿಕಲ್‌ನಿಂದ ಮಾತ್ರೆ ಅಥವಾ ಔಷಧಿಯನ್ನು ಖರೀದಿಸುವಾಗ ಸಾಮಾನ್ಯವಾಗಿ ‘ಎಕ್ಸ್‌ಪೈರಿ ಡೇಟ್’ ಮಾತ್ರ ನೋಡುತ್ತೇವೆ. ಆದರೆ ಔಷಧಿಯ ಸ್ಟ್ರಿಪ್ ಅಥವಾ ಪ್ಯಾಕೆಟ್ ಮೇಲೆ ಇರುವ ಕೆಂಪು ಪಟ್ಟಿ ಕೇವಲ ವಿನ್ಯಾಸಕ್ಕಾಗಿ ಅಥವಾ ಕಂಪನಿಯ ಲೋಗೋಗಾಗಿ ಅಲ್ಲ. ಅದರ ಹಿಂದೆ ಬಹಳ ಮುಖ್ಯವಾದ ಆರೋಗ್ಯ ಎಚ್ಚರಿಕೆ ಅಡಗಿದೆ.​ಔಷಧಿಯ ಮೇಲಿನ ಕೆಂಪು ಪಟ್ಟಿಯ ರಹಸ್ಯ ಮತ್ತು ಅದರ ಅರ್ಥವೇನು ಎಂಬುದರ ವಿವರ ಇಲ್ಲಿದೆ:

Sponsored

1. ವೈದ್ಯರ ಸಲಚೆ ಚೀಟಿ ಕಡ್ಡಾಯ
​ಔಷಧಿಯ ಸ್ಟ್ರಿಪ್‌ನ ಮೇಲೆ ಕೆಂಪು ಬಣ್ಣದ ಗೆರೆ ಅಥವಾ ಪಟ್ಟಿ ಇದ್ದರೆ, ಆ ಔಷಧಿಯನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಕಾರಣಕ್ಕೂ ಮಾರಾಟ ಮಾಡಲುಬಾರದು ಮತ್ತು ನೀವೂ ಸಹ ಸ್ವಯಂ-ವೈದ್ಯರಾಗಿ ಬಳಸಬಾರದು ಎಂದರ್ಥ.
​2. ಯಾವ ರೀತಿಯ ಔಷಧಿಗಳಿರುತ್ತವೆ?
​ಸಾಮಾನ್ಯವಾಗಿ ಆಂಟಿಬಯಾಟಿಕ್ಸ್ , ಸ್ಟಿರಾಯ್ಡ್‌ಗಳು ಹಾಗೂ ನರಮಂಡಲಕ್ಕೆ ಅಥವಾ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಪ್ರಬಲ ಔಷಧಗಳು ಈ ವರ್ಗದ ಅಡಿಯಲ್ಲಿ ಬರುತ್ತವೆ. ಇವುಗಳನ್ನು ಬೇಕಾಬಿಟ್ಟಿಯಾಗಿ ಬಳಸುವುದರಿಂದ ಅಥವಾ ಮನಸ್ಸಿಗೆ ಬಂದಂತೆ ಮೆಡಿಕಲ್ ಸ್ಟೋರ್‌ನಲ್ಲಿ ಕೇಳಿ ಪಡೆಯುವುದರಿಂದ ದೇಹದ ಮೇಲೆ ಅಡ್ಡಪರಿಣಾಮಗಳು ಉಂಟಾಗಬಹುದು. ​

Advertisement
Advertisement

a. ಕೆಂಪು ಪಟ್ಟಿ ಇರಲು ಕಾರಣವೇನು? (ಸರ್ಕಾರದ ನಿಯಮ)
​ಭಾರತ ಸರ್ಕಾರದ ಔಷಧ ನಿಯಂತ್ರಣ ಕಾಯ್ದೆಯ ಪ್ರಕಾರ, ಪ್ರಬಲವಾದ ಮತ್ತು ದುರ್ಬಳಕೆಯಾಗುವ ಸಾಧ್ಯತೆಯಿರುವ ಔಷಧಿಗಳನ್ನು ಸಾಮಾನ್ಯ ಜನರು ಸುಲಭವಾಗಿ ಗುರುತಿಸಬೇಕು ಹಾಗೂ ಮೆಡಿಕಲ್ ಸಿಬ್ಬಂದಿಯೂ ಸಹ ವೈದ್ಯರ ಚೀಟಿ ಇಲ್ಲದೆ ಇವುಗಳನ್ನು ನೀಡಬಾರದು ಎಂಬ ಎಚ್ಚರಿಕೆಗಾಗಿ ಈ ಕೆಂಪು ಪಟ್ಟಿಯನ್ನು ಮುದ್ರಿಸುವುದು ಕಡ್ಡಾಯಗೊಳಿಸಲಾಗಿದೆ.
​
b.ಇತರ ಬಣ್ಣಗಳ ಅರ್ಥಗಳೇನು?
​ಮಾತ್ರೆಗಳ ಸ್ಟ್ರಿಪ್‌ಗಳ ಮೇಲೆ ಕೆಂಪು ಪಟ್ಟಿಯಲ್ಲದೆ ಇತರ ಬಣ್ಣಗಳ ಗುರುತುಗಳೂ ಇರುತ್ತವೆ:
​ಹಸಿರು ಪಟ್ಟಿ : ಇವು ಸಸ್ಯಜನ್ಯ ಅಥವಾ ಆಯುರ್ವೇದ ಉತ್ಪನ್ನಗಳಾಗಿರಬಹುದು ಅಥವಾ ಇವುಗಳ ಬಳಕೆಗೆ ಕಟ್ಟುನಿಟ್ಟಾದ ಪ್ರಿಸ್ಕ್ರಿಪ್ಷನ್ ಅಗತ್ಯವಿರುವುದಿಲ್ಲ.
​ಯಾವುದೇ ಪಟ್ಟಿ ಇಲ್ಲದಿರುವುದು: ಕೆಲವು ಸಾಮಾನ್ಯ ನೋವಿನ ಮಾತ್ರೆಗಳು ಅಥವಾ ವಿಟಮಿನ್ ಟ್ಯಾಬ್ಲೆಟ್‌ಗಳ ಮೇಲೆ ಯಾವುದೇ ಬಣ್ಣದ ಪಟ್ಟಿಗಳಿರುವುದಿಲ್ಲ. ಆದರೂ ವೈದ್ಯರ ಸಲಹೆ ಪಡೆಯುವುದು ಯಾವಾಗಲೂ ಉತ್ತಮ.
​ಆದ್ದರಿಂದ, ಮುಂದಿನ ಬಾರಿ ಯಾವುದೇ ಔಷಧಿಯ ಸ್ಟ್ರಿಪ್ ಮೇಲೆ ಕೆಂಪು ಪಟ್ಟಿ ಇದ್ದರೆ, ವೈದ್ಯರ ಚೀಟಿ ಇಲ್ಲದೆ ಅದನ್ನು ಸ್ವತಃ ಖರೀದಿಸುವುದು ಅಥವಾ ಬಳಸುವುದು ಅಪಾಯಕಾರಿ ಎನ್ನುವುದನ್ನು ಮರೆಯದಿರಿ!

Advertisement
    Advertisement
    Advertisement