ಮಂಗಳವಾರ, 3 ನವೆಂಬರ್ 2026

ಹಸಿರು ದೀಪಾವಳಿಗೆ ಪೊಲೀಸ್‌ ಇಲಾಖೆ ಕರೆ: ಪಟಾಕಿ ಸಿಡಿಸಲು ಸಮಯ ನಿಗದಿ

Fireworks Ban
Advertisement
Advertisement

ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಕಾಪಾಡಲು ಹಾಗೂ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸುವಂತೆ ಕೋರಿ ರಾಜ್ಯ ಪೊಲೀಸ್‌ ಇಲಾಖೆ ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟ ಮಾಡಿದೆ. ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದ್ದು, ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

Sponsored

​ಪ್ರಮುಖ ಸುರಕ್ಷತಾ ಕ್ರಮಗಳು :
​ಪಟಾಕಿ ಹಚ್ಚುವಾಗ ಕೈಗೆ ಗ್ಲೌಸ್, ಕಣ್ಣಿಗೆ ಸುರಕ್ಷತಾ ಕನ್ನಡಕ ಧರಿಸುವುದು ಮತ್ತು ಹತ್ತಿಯ ಬಟ್ಟೆಗಳನ್ನು ಮಾತ್ರ ಬಳಸುವುದು ಸೂಕ್ತ ; ಸಿಂಥೆಟಿಕ್, ನೈಲಾನ್ ಮತ್ತು ಪಾಲಿಸ್ಟರ್ ಬಟ್ಟೆಗಳನ್ನು ಧರಿಸಬಾರದು.​

Advertisement
Advertisement

ಮಕ್ಕಳು ಪಟಾಕಿ ಹಚ್ಚುವಾಗ ಪೋಷಕರು ಕಡ್ಡಾಯವಾಗಿ ಜೊತೆಯಿರಬೇಕು ಮತ್ತು ಯಾರೂ ಕೈಯಲ್ಲಿ ಪಟಾಕಿಗಳನ್ನು ಹಿಡಿದು ಹಚ್ಚಬಾರದು.

Advertisement

​ಅಧಿಕೃತ ಪರವಾನಗಿ ಪಡೆದ ಮಳಿಗೆಗಳಿಂದ ಕ್ಯೂಆರ್ ಕೋಡ್ ಪರಿಶೀಲಿಸಿ ಉತ್ತಮ ಗುಣಮಟ್ಟದ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಬೇಕು.

​ಹೆಚ್ಚು ಶಬ್ದ ಹಾಗೂ ವಾಯುಮಾಲಿನ್ಯ ಉಂಟುಮಾಡುವ ನಿಷೇಧಿತ ಪಟಾಕಿಗಳನ್ನು ಬಳಸಬಾರದು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಅಥವಾ ವಾಹನಗಳ ಪಾರ್ಕಿಂಗ್ ಸ್ಥಳಗಳಲ್ಲಿ ಪಟಾಕಿ ಸಿಡಿಸಬಾರದು.

​ಬಳಸಿದ ಪಟಾಕಿಗಳನ್ನು ಬಕೆಟ್‌ನಲ್ಲಿಟ್ಟು ಅದಕ್ಕೆ ಮರಳು ಅಥವಾ ನೀರನ್ನು ಹಾಕಿ ಸಂಪೂರ್ಣವಾಗಿ ನಂದಿಸಬೇಕು ಹಾಗೂ ಹತ್ತಿರದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಇಟ್ಟುಕೊಳ್ಳಬೇಕು.

​ಅಕ್ರಮವಾಗಿ ಪಟಾಕಿ ಮಾರಾಟ ಮಾಡುವವರ ಬಗ್ಗೆ ಅಥವಾ ನಿಗದಿತ ಸಮಯ ಮೀರಿ ಪಟಾಕಿ ಸಿಡಿಸುವವರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ತುರ್ತು ಸಂಖ್ಯೆ 112ಗೆ ಸಾರ್ವಜನಿಕರು ಮಾಹಿತಿ ನೀಡಬಹುದು.

ನಿಯಮ ಉಲ್ಲಂಘಿಸುವವರ ವಿರುದ್ಧ ಬಿಎನ್‌ಎಸ್, ಸ್ಫೋಟಕ ಕಾಯ್ದೆ ಹಾಗೂ ಮಾಲಿನ್ಯ ನಿಯಂತ್ರಣ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ತಕ್ಷಣವೇ 112 ಅಥವಾ 108 ಅನ್ನು ಸಂಪರ್ಕಿಸಿ ವೈದ್ಯರ ಸಲಹೆ ಪಡೆಯುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement
Advertisement